Homeಕ್ರೀಡಾ ಸುದ್ದಿವೀರೇಂದ್ರ ಸೆಹ್ವಾಗ್‌ ದಾಖಲೆ ಮುರಿದ ರೋಹಿತ್‌ಶರ್ಮಾ

ವೀರೇಂದ್ರ ಸೆಹ್ವಾಗ್‌ ದಾಖಲೆ ಮುರಿದ ರೋಹಿತ್‌ಶರ್ಮಾ

ಚೆನ್ನೈ,ಜೂ.21- ಆಫ್ಘಾನಿಸ್ತಾನ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಆಕರ್ಷಕ ಅರ್ಧಶತಕ ಸಿಡಿಸಿದ ರೋಹಿತ್‌ ಶರ್ಮಾ (79ರನ್‌), ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ದಾಖಲೆ ಮುರಿದಿದ್ದಾರೆ. ಯುವ ಆಟಗಾರ ಯಶಸ್ವಿ ಜೈಸ್ವಾಲ್‌ರೊಂದಿಗೆ 170 ರನ್‌ಗಳ ಜೊತೆಯಾಟ ನೀಡಿ ಭಾರತ 219 ರನ್‌ಗಳನ್ನು ಸುಲಭವಾಗಿ ಹಿಂಬಾಲಿಸಲು ನೆರವಾದ ರೋಹಿತ್‌ ಶರ್ಮಾ, ಆರಂಭಿಕ ಆಟಗಾರನಾಗಿ 386 ಅಂತಾರಾಷ್ಟ್ರೀಯ ಇನಿಂಗ್‌್ಸನಲ್ಲಿ 16,137 ರನ್‌ ಗಳಿಸುವ ಮೂಲಕ ಭಾರತ ತಂಡದ ಪರ ಆರಂಭಿಕನಾಗಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಭಾರತೀಯ ಆರಂಭಿಕ ಆಟಗಾರರಿಂದ ಅತಿ ಹೆಚ್ಚು ರನ್‌ಗಳು:
ರೋಹಿತ್‌ ಶರ್ಮಾ: 16137 ರನ್‌ಗಳು
ವೀರೇಂದ್ರ ಸೆಹ್ವಾಗ್‌‍: 16119 ರನ್‌ಗಳು
ಸಚಿನ್‌ ತೆಂಡೂರ್ಲ್ಕ: 15335 ರನ್‌ಗಳು
ಸುನಿಲ್‌ ಗವಾರ್ಸ್ಕ: 12258 ರನ್‌ಗಳು
ಶಿಖರ್‌ ಧವನ್‌: 10867 ರನ್‌ಗಳು

ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಭಾರತ ಕ್ಲೀನ್‌ ಸ್ವೀಪ್‌ ಮಾಡಿದ್ದು, ರೋಹಿತ್‌ ಶರ್ಮಾ ಆರಂಭಿಕ ಪಂದ್ಯದಲ್ಲಿ ನಿರಾಸೆ ಮೂಡಿಸಿದರೂ, ಎರಡನೇ ಪಂದ್ಯದಲ್ಲಿ 48 ರನ್‌ ಹಾಗೂ ಮೂರನೇ ಪಂದ್ಯದಲ್ಲಿ 79 ರನ್‌ ಗಳಿಸಿ ಆಯ್ಕೆಗಾರರ ಗಮನ ಸೆಳೆದಿದ್ದಲ್ಲದೆ ಒಟ್ಟಾರೆ ಆರಂಭಿಕ ಆಟಗಾರರ ಸಾಲಿನಲ್ಲಿ ಅತಿ ಹೆಚ್ಚು ಗಳಿಸಿದ 5ನೇ ಆಟಗಾರನಾಗಿ ರೋಹಿತ್‌ ಶರ್ಮಾ ಗುರುತಿಸಿಕೊಂಡಿದ್ದಾರೆ. ಶ್ರೀಲಂಕಾದ ಸನತ್‌ ಜಯಸೂರ್ಯ 19298 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

RELATED ARTICLES
spot_img

Latest News