Homeಜಿಲ್ಲಾ ಸುದ್ದಿಗಳುರೀಲ್ಸ್‌‍ ನೋಡಬೇಡ ಎಂದಿದ್ದಕ್ಕೆ ಜೀವವನ್ನೇ ಕಳೆದುಕೊಂಡ ವಿದ್ಯಾರ್ಥಿನಿ

ರೀಲ್ಸ್‌‍ ನೋಡಬೇಡ ಎಂದಿದ್ದಕ್ಕೆ ಜೀವವನ್ನೇ ಕಳೆದುಕೊಂಡ ವಿದ್ಯಾರ್ಥಿನಿ

ಹುಬ್ಬಳ್ಳಿ,ಆ.13- ಹೆಚ್ಚು ಮೊಬೈಲ್‌ ಬಳಕೆ ಮಾಡಬೇಡ, ರೀಲ್ಸ್‌‍ ನೋಡಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿರುವ ಘಟನೆ ಗರಗ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದ ಮೇಘಾ ಗುಬ್ಬಣ್ಣವರ (20) ಎಂಬ ವಿದ್ಯಾರ್ಥಿನಿಯೇ ಆತಹತ್ಯೆ ಮಾಡಿಕೊಂಡವರು.ಧಾರವಾಡದ ಖಾಸಗಿ ಕಾಲೇಜೊಂದರಲ್ಲಿ ಡಿಇಡಿ ವಿದ್ಯಾಭ್ಯಾಸ ಮಾಡುತ್ತಿದ್ದ ಮೇಘಾ ದಿನವಿಡೀ ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಾ ಕಾಲಹರಣ ಮಾಡುತ್ತಿದ್ದಳು. ಅದನ್ನು ಗಮನಿಸುತ್ತಿದ್ದ ಆಕೆಯ ತಾಯಿ ರೀಲ್ಸ್‌‍ ಹೆಚ್ಚು ನೋಡಬೇಡ, ಓದಿನ ಕಡೆ ಗಮನ ಕೊಡು ಎಂದು ಬುದ್ಧಿವಾದ ಹೇಳಿದ್ದಾರೆ.

ಅಷ್ಟಕ್ಕೇ ಮೇಘಾ ಮನೆಯಲ್ಲಿ ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಈ ನಿರ್ಧಾರದಿಂದ ಕುಟುಂಬದವರು ದುಃಖಿತರಾಗಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES
spot_img

Latest News