ನಿತ್ಯ ನೀತಿ : ಇಡೀ ದಿನ ಕೆಲಸದಲ್ಲೇ ನಿರತರಾಗಿರುತ್ತೇವೆ ಅನ್ನುವುದು ಮುಖ್ಯವಲ್ಲ. ಕೆಲಸ ಯಾವುದು ಎಂಬುದು ಮುಖ್ಯವಾಗಿರುತ್ತದೆ. ಸತ್ಕಾರ್ಯದಲ್ಲಿ ತೊಡಗಿಕೊಳ್ಳೋಣ..!
ಪಂಚಾಂಗ : ಭಾನುವಾರ, 01-02-2026
ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಶುಕ್ಲ / ತಿಥಿ: ಹುಣ್ಣಿಮೆ / ನಕ್ಷತ್ರ: ಪುಷ್ಯ / ಯೋಗ: ಪ್ರೀತಿ / ಕರಣ: ವಿಷ್ಟಿ
ಸೂರ್ಯೋದಯ – 06.47
ಸೂರ್ಯಾಸ್ತ – 6.21
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ :
ಮೇಷ: ಇನ್ನೊಬ್ಬರ ಮಾತುಗಳನ್ನು ಆಲಿಸಿ ತೀರ್ಮಾನಕ್ಕೆ ಬರುವುದು ಅನಿರ್ವಾಯವಾಗಲಿದೆ.
ವೃಷಭ: ಸ್ವಂತ ಉದ್ಯೋಗ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಆತ್ಮಗೌರವಕ್ಕೆ ಹೆಚ್ಚು ಬೆಲೆ ಕೊಡುವಿರಿ.
ಮಿಥುನ: ಹಿರಿಯ ವಿದ್ವಾಂಸರಿಗೆ ಗೌರವ ಸಿಗುತ್ತದೆ. ನಿರೀಕ್ಷಿತ ಮಟ್ಟಕ್ಕಿಂತ ಆದಾಯ ಹೆಚ್ಚಿರುತ್ತದೆ.
ಕಟಕ: ಹಿರಿಯ ನಾಗರಿಕರಿಗೆ ಸರ್ಕಾರಿ ನೆರವು. ಮಕ್ಕಳ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಸಿಂಹ: ಮಕ್ಕಳಿಂದ ನೆಮ್ಮದಿ ಸಿಗಲಿದೆ. ವ್ಯಾಪಾರ- ವ್ಯವಹಾರದಲ್ಲಿ ಲಾಭ.
ಕನ್ಯಾ: ಸೋದರನ ಆಗಮನ ದಿಂದ ಮನೆಯಲ್ಲಿ ಹೆಚ್ಚಿನ ಸಂಭ್ರಮ ಮೂಡಲಿದೆ.
ತುಲಾ: ಸೌಜನ್ಯದಿಂದ ನಡೆದು ಕೊಳ್ಳುವುದರಿಂದ ನೆರೆಹೊರೆ ಯವರು ನಿಮ್ಮ ಕಷ್ಟಗಳಿಗೆ ಸ್ಪಂದಿಸುವರು. ಭಜನೆಯಿಂದ ನೆಮ್ಮದಿ ಸಿಗಲಿದೆ.
ವೃಶ್ಚಿಕ: ಮಕ್ಕಳಿಂದ ಶುಭವಾರ್ತೆ ಕೇಳುವಿರಿ.
ಹೊಸ ಹೊಸ ಅವಕಾಶಗಳು ಒದಗಿ ಬರಲಿವೆ.
ಧನುಸ್ಸು: ಇತರರೊಂದಿಗೆ ಸೇರಿ ಮಾಡುವ ಕೆಲಸ- ಕಾರ್ಯಗಳಲ್ಲಿ ಉತ್ತಮ ಲಾಭ ದೊರೆಯಲಿದೆ.
ಮಕರ: ದೂರ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡುವುದು ಉತ್ತಮ.
ಕುಂಭ: ಹಣಕಾಸಿನ ವ್ಯತ್ಯಾಸಗಳಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.
ಮೀನ: ನಿಮ್ಮ ಮೇಲಿದ್ದ ಆಪಾದನೆಗಳು ದೂರಾಗಿ ಮೇಲ ಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.
