ನಿತ್ಯ ನೀತಿ : ಎತ್ತರವೂ ದೊಡ್ಡದಲ್ಲ, ಅಧಿಕಾರವೂ ದೊಡ್ಡದಲ್ಲ, ಕಷ್ಟದಲ್ಲಿ ಜೊತೆಯಾಗಿ ನಿಲ್ಲುವವನೇ ಎಲ್ಲರಿಗಿಂತ ದೊಡ್ಡವನು.!
ಪಂಚಾಂಗ : ಶುಕ್ರವಾರ, 06-11-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಹೇಮಂತ / ಮಾಸ: ಆಶ್ವಯುಜ / ಪಕ್ಷ: ಕೃಷ್ಣ / ತಿಥಿ: ದ್ವಾದಶಿ / ನಕ್ಷತ್ರ: ಹಸ್ತ / ಯೋಗ: ವಿಷ್ಕಂಭ / ಕರಣ: ಗರಜ
ಸೂರ್ಯೋದಯ – ಬೆ.6.15
ಸೂರ್ಯಾಸ್ತ – 05.53
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಆಪ್ತರೊಂದಿಗೆ ವಿಚಾರ ವಿನಿಮಯ ನಡೆಸುವಿರಿ. ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವಿರಿ.
ವೃಷಭ: ಉದ್ಯೋಗ ಬದಲಾವಣೆಗೆ ಅಡೆತಡೆ ಉಂಟಾಗಲಿದೆ. ಅತೀ ಒತ್ತಡಕ್ಕೆ ಒಳಗಾಗದಿರಿ.
ಮಿಥುನ: ಬಹಳ ದಿನಗಳ ನಂತರ ನಿಮ್ಮ ಕನಸುಗಳು ನನಸಾಗುವ ಸಂದರ್ಭಗಳು ಎದುರಾಗಲಿವೆ.
ಕಟಕ: ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.
ಸಿಂಹ: ಹೊಸ ವ್ಯವಹಾರ ವನ್ನು ಪ್ರಾರಂಭಿಸಿದ್ದರೆ, ಪ್ರಚಾರ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿ.
ಕನ್ಯಾ: ಸಹೋದರರು ಆರ್ಥಿಕ ಸಹಾಯ ಮಾಡುವರು. ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಲಿದೆ.
ತುಲಾ: ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮನದಲ್ಲಿ ರುವ ದುಗುಡ ನಿವಾರಿಸಿಕೊಳ್ಳಲು ಯತ್ನಿಸುವಿರಿ.
ವೃಶ್ಚಿಕ: ವಿಭಿನ್ನ ಜನರನ್ನು ಭೇಟಿಯಾಗುವುದರಿಂದ ವೃತ್ತಿ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸಲಿದೆ.
ಧನುಸ್ಸು: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ. ಜಾಗ್ರತೆ ವಹಿಸಿ.
ಮಕರ: ಧಾರ್ಮಿಕ ಕಾರ್ಯಗಳತ್ತ ಗಮನ ಹರಿಸುವಿರಿ. ಕೀರ್ತಿ ನಿಮ್ಮನ್ನು ಅರಸಿ ಬರಲಿದೆ.
ಮೀನ: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.
