ನಿತ್ಯ ನೀತಿ : ಓದಿನಿಂದ ಕಲಿತ ಪಾಠಗಳು ಮರೆತರೂ ಮರೆಯಬಹುದು, ಆದರೆ… ಜೀವನದಲ್ಲಿ ಅನುಭವದಿಂದ ಕಲಿತ ಪಾಠಗಳು ಮರೆಯಲು ಸಾಧ್ಯವಿಲ್ಲ.
ಪಂಚಾಂಗ : ಗುರುವಾರ, 16-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ /ಪಕ್ಷ: ಶುಕ್ಲ / ತಿಥಿ: ದ್ವಿತೀಯಾ / ನಕ್ಷತ್ರ: ಆಶ್ಲೇಷಾ / ಯೋಗ: ಸಿದ್ಧಿ / ಕರಣ: ತೈತಿಲ
ಸೂರ್ಯೋದಯ – ಬೆ.6.02
ಸೂರ್ಯಾಸ್ತ – 06.51
ರಾಹುಕಾಲ – 1.30- 3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00- 10.30
ರಾಶಿಭವಿಷ್ಯ :
ಮೇಷ: ಸ್ಥಿರಸ್ತಿ ಸಂಪಾದನೆ, ಉದ್ಯೋಗದಲ್ಲಿ ಪ್ರಗತಿ.
ವೃಷಭ: ಹಿತ ಶತ್ರುಗಳಿಂದ ತೊಂದರೆ, ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಪ್ರಗತಿ.
ಮಿಥುನ:ಕೆಲಸ ಕಾರ್ಯಗಳಲ್ಲಿ ವಿಳಂಬ, ಅ ಕ ಖರ್ಚು, ವ್ಯಾಪಾರದಲ್ಲಿ ಅಲ್ಪ ಲಾಭ.
ಕಟಕ: ಕುಟುಂಬ ಸೌಖ್ಯ, ಮನಃಶಾಂತಿ, ಆದಾಯಕ್ಕಿಂತ ಖರ್ಚು ಜಾಸಿ.
ಸಿಂಹ: ಸಲ್ಲದ ಅಪವಾದ, ಶತ್ರುಬಾಧೆ.
ಕನ್ಯಾ: ಮಕ್ಕಳಿಂದ ನೆಮ್ಮದಿ, ಸ್ತ್ರೀಯರಿಗೆ ಆಭರಣ ಪ್ರಾಪ್ತಿ, ಬಂಧುಗಳ ಭೇಟಿ.
ತುಲಾ: ಧನ ಲಾಭ, ನಂಬಿಕೆ ದ್ರೋಹ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ.
ವೃಶ್ಚಿಕ: ದುರಾಲೋಚನೆ, ದುಷ್ಟ ಚಿಂತೆ, ಹೇಳಿಕೆ ಮಾತನ್ನು ಕೇಳುವಿರಿ, ಚಂಚಲ ಮನಸ್ಸು, ದಾಂಪತ್ಯದಲ್ಲಿ ಅನ್ಯೋನ್ಯತೆ.
ಧನುಸ್ಸು:ಆಕಸ್ಮಿಕ ಧನ ಲಾಭ, ಮಿತ್ರರ ಸಹಾಯ, ಎಷ್ಟೇ ಕಷ್ಟ ಬಂದರೂ ಮುನ್ನುಗುವ ಚೈತನ್ಯ.
ಮಕರ: ಸ್ಥಳ ಬದಲಾವಣೆ, ಪ್ರಭಾವಿ ವ್ಯಕ್ತಿಗಳ ಭೇಟಿ, ಮನಃಶಾಂತಿ.
ಕುಂಭ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಮನಸ್ಸಿಗೆ ಸದಾ ಸಂಕಟ.
ಮೀನ: ಸರ್ಕಾರಿ ನೌಕರರಿಗೆ ಬಡ್ತಿ, ಹೊಸ ವ್ಯಕ್ತಿಗಳ ಪರಿಚಯ.
