Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-05-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-05-2026)

Today's Horoscope : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-05-2026)

ನಿತ್ಯ ನೀತಿ : ಮನುಷ್ಯನಿಗೆ ಸತ್ಯದ ಅರಿವು ಇದ್ದರೂ ಅದು ತನಗೆ ಉಪಯುಕ್ತವಾಗುವಂತಿದ್ದರೆ ಮಾತ್ರ ಒಪ್ಪುತ್ತಾನೆ..!

ಪಂಚಾಂಗ : ಭಾನುವಾರ, 17-05-2026
ಪರಾಭವ ನಾಮ ಸಂವತ್ಸರ / ಉತ್ತರಾಯಣ । ಋತು: ಸೌರಗ್ರೀಷ್ಮ / ಮಾಸ: ಅಧಿಕ ಶ್ರೇಷ್ಠ । ಪಕ್ಷ: ಶುಕ್ಲ / ತಿಥಿ: ಪ್ರತಿಪದ್‌ / ನಕ್ಷತ್ರ: ಕೃತ್ತಿಕಾ / ಯೋಗ: ಶೋಭನ / ಕರಣ: ಕಿಂಸ್ತುಘ್ನ ಸೂರ್ಯೋದಯ – ಬೆ.5.55
ಸೂರ್ಯಾಸ್ತ – 06.39
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ: ತಾಳ್ಮೆಯಿಂದ ವರ್ತಿಸಿದರೆ ಗೆಲುವು ನಿಮಗೆ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ.
ವೃಷಭ: ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನದಲ್ಲಿ ನೀವು ವಿಫಲರಾಗುವಿರಿ. ಎಚ್ಚರಿಕೆಯಿಂದಿರಿ.
ಮಿಥುನ: ಯಾರನ್ನೂ ಅತಿಯಾಗಿ ನಂಬಲು ಹೋಗ ದಿರಿ. ಪರಾವಲಂಬನೆಯಿಂದ ಅಪಾಯವೇ ಹೆಚ್ಚು.

ಕಟಕ: ವ್ಯಾಪಾರದಲ್ಲಿ ಅನುಕೂಲವಾಗಲಿದೆ. ಸಂಗಾತಿ ಮನೆ ಕಡೆಯಿಂದ ಶುಭ ಸುದ್ದಿ ಬರಲಿದೆ.
ಸಿಂಹ: ಪಿತ್ರಾರ್ಜಿತ ಆಸ್ತಿ ವಿಚಾರದ ಮಾತುಕತೆ ನಡೆಯಲಿದೆ. ವಾಹನದಿಂದ ಅಪಾಯ ಎದುರಾಗಲಿದೆ.
ಕನ್ಯಾ: ಹೊಸ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ತುಲಾ: ಕೌಟುಂಬಿಕ ಮತ್ತು ವೈವಾಹಿಕ ಜೀವನ ಆಹ್ಲಾದಕರವಾಗಿರುತ್ತದೆ.
ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಧನುಸ್ಸು: ಗೃಹೋಪಯೋಗಿ ವಸ್ತುಗಳ ಖರೀದಿಗೆ ಹಣ ಖರ್ಚು ಮಾಡುವಿರಿ.

ಮಕರ: ಹೊಸ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶವೊಂದು ದಿಢೀರನೆ ಒದಗಿಬರಲಿದೆ.
ಕುಂಭ:ಸೇವೆಯ ಆಧಾರದ ಮೇಲೆ ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಹೆಚ್ಚು ಲಾಭ ಗಳಿಸುವಿರಿ.
ಮೀನ: ಹೆಚ್ಚಿನ ಲಾಭದ ಆಸೆಗೆ ಇರುವ ಉಳಿತಾಯದ ಹಣವನ್ನು ಖರ್ಚು ಮಾಡದಿರಿ.

RELATED ARTICLES

Latest News