Thursday, April 16, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-02-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-02-2026)

Today's Horoscope

ನಿತ್ಯ ನೀತಿ : ಗೆದ್ದವರು ಮಾತ್ರ ಪಾಠ ಹೇಳುವುದಿಲ್ಲ , ಸೋತವರು ಅದಕ್ಕಿಂತಲೂ ಚೆಂದದ ಪಾಠ ಹೇಳುತ್ತಾರೆ. ಅನುಭವವೇ ನಮ ಗುರು. -ಶ್ರೀ ಸಿದ್ಧೇಶ್ವರ ಸ್ವಾಮೀಜಿ

ಪಂಚಾಂಗ : ಶುಕ್ರವಾರ, 27-02-2026

ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ / ಪಕ್ಷ: ಶುಕ್ಲ / ತಿಥಿ: ಏಕಾದಶಿ / ನಕ್ಷತ್ರ: ಆರ್ದ್ರಾ / ಯೋಗ: ಆಯುಷ್ಮಾನ / ಕರಣ: ವಣಿಜ
ಸೂರ್ಯೋದಯ – 06.38
ಸೂರ್ಯಾಸ್ತ – 6.29
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :

ಮೇಷ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ.
ವೃಷಭ: ಹೊಸ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶವೊಂದು ದಿಢೀರನೆ ಒದಗಿಬರಲಿದೆ.
ಮಿಥುನ: ರಾಜಕೀಯ ಭವಿಷ್ಯದ ಬಗ್ಗೆ ಪ್ರಭಾವಿ ರಾಜಕಾರಣಿಯೊಂದಿಗೆ ಮಾತುಕತೆ ನಡೆಸುವಿರಿ.

ಕಟಕ: ಯುವಕರು ಶಾಶ್ವತ ಕೆಲಸ ಹುಡುಕುವ ಪ್ರಯತ್ನ ದಲ್ಲಿ ಯಶಸ್ವಿಯಾಗುತ್ತಾರೆ.
ಸಿಂಹ: ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕತೆಯಿಂದ ಮಾಡಿ.
ಕನ್ಯಾ: ಕುಟುಂಬದ ಅಗತ್ಯ ಗಳನ್ನು ಪೂರೈಸುವುದರಲ್ಲೇ ಹೆಚ್ಚು ಸಮಯ ಕಳೆಯುವಿರಿ.

ತುಲಾ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ.
ವೃಶ್ಚಿಕ: ತಲೆನೋವು, ಮೊಣಕಾಲು ನೋವು ಇತ್ಯಾದಿಗಳಿಂದ ತೊಂದರೆಗೆ ಒಳಗಾಗಬಹುದು.
ಧನುಸ್ಸು: ಜವಾಬ್ದಾರಿಗಳನ್ನು ಪೂರೈಸಿ. ಖಂಡಿತ ವಾಗಿಯೂ ಉನ್ನತ ಮಟ್ಟಕ್ಕೆ ಏರುವಿರಿ.

ಮಕರ: ಕೃಷಿ ಭೂಮಿ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸ-ಕಾರ್ಯಗಳಿಂದ ಹೆಚ್ಚು ಲಾಭ ಗಳಿಸುವಿರಿ.
ಕುಂಭ: ದೈನಂದಿನ ಕೆಲಸಗಳು ನಿರಾತಂಕವಾಗಿ ನಡೆಯಲಿವೆ. ಕುಟುಂಬದ ಕಡೆ ಗಮನ ಹರಿಸಿ.
ಮೀನ: ಉದ್ಯೋಗದಲ್ಲಿನ ಮಾನಸಿಕ ಕಿರಿಕಿರಿಯಿಂದಾಗಿ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

RELATED ARTICLES

Latest News