ನಿತ್ಯ ನೀತಿ : ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು, ಆದರೆ ಕಳೆದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಕ್ಷಣವನ್ನೂ ಮೌಲ್ಯಯುತವಾಗಿಸಿ.
ಪಂಚಾಂಗ : ಶನಿವಾರ, 27-06-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ನಿಜ ಜ್ಯೇಷ್ಠ / ಪಕ್ಷ: ಶುಕ್ಲ /ತಿಥಿ: ತ್ರಯೋದಶಿ / ನಕ್ಷತ್ರ: ಅನುರಾಧಾ / ಯೋಗ: ಸಾಧ್ಯ / ಕರಣ: ಕೌಲವ
ಸೂರ್ಯೋದಯ – ಬೆ.5.56
ಸೂರ್ಯಾಸ್ತ – 06.50
ರಾಹುಕಾಲ – 9.00-10.30
ಯಮಗಂಡ ಕಾಲ – 1.00- 3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ಮಕ್ಕಳು ಶಿಕ್ಷಣ ಹಾಗೂ ಸೃಜನಶೀಲ ಕ್ಷೇತ್ರ ಗಳಲ್ಲಿ ಆಸಕ್ತಿ ವಹಿಸುವರು.
ವೃಷಭ: ಉದ್ಯೋಗದಲ್ಲಿ ಬಡ್ತಿ ಹಾಗೂ ನೀವು ಕೇಳಿದ ಸ್ಥಳಕ್ಕೆ ವರ್ಗಾವಣೆ ಪಡೆಯಲು ಅವಕಾಶವಿದೆ.
ಮಿಥುನ: ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಆಲೋಚನೆ ಮಾಡದಿರಿ. ಎಚ್ಚರಿಕೆ ವಹಿಸಿ.
ಕಟಕ: ಹಲವು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಸಾಲಗಾರರ ಒತ್ತಡ ಹೆಚ್ಚಾಗಲಿದೆ.
ಸಿಂಹ: ನಿಮ್ಮ ಅಹಂಕಾರದ ಕಾರಣಕ್ಕೆ ಹಣಕಾಸು ನಷ್ಟ ಅನುಭವಿಸಲಿದ್ದೀರಿ.
ಕನ್ಯಾ: ಉದ್ಯೋಗದ ಕಡೆಗೆ ಹೆಚ್ಚಿನ ಗಮನ ಹರಿಸಿ. ನಿರೀಕ್ಷೆಗೂ ಮೀರಿ ಖರ್ಚು ಹೆಚ್ಚಾಗಲಿದೆ.
ತುಲಾ: ಯಾವುದೇ ಕಾರಣಕ್ಕೂ ಕೆಲಸ ಬಿಡುವಂಥ ನಿರ್ಧಾರ ಮಾಡಬೇಡಿ ಯಾವುದೇ ಅಪಾಯಕಾರಿ ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.
ವೃಶ್ಚಿಕ: ಇತರರ ಸಾಲಗಳಿಗೆ ಜಾಮೀನಾಗಿ ನಿಲ್ಲಬೇಡಿ. ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಧನುಸ್ಸು: ಹೆಜ್ಜೆಹೆಜ್ಜೆಗೂ ಶತ್ರುಗಳಿಂದ ಅಡೆತಡೆ ಸೇರಿದಂತೆ ಹಲವು ತೊಂದರೆಗಳು ಎದುರಾಗಲಿವೆ.
ಮಕರ:ಕಾನೂನು ತೊಡಕು ಎದುರಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿನ್ನಡೆಯಾಗಲಿದೆ.
ಕುಂಭ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಗಳಿಗೆ ಭಿನ್ನಾಭಿಪ್ರಾಯ ಎದುರಾಗಬಹುದು.
ಮೀನ: ಮಧುಮೇಹ, ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳಬಹುದು ಅಥವಾ ಉಲ್ಬಣಿಸಬಹುದು.
