Homeಅಂತಾರಾಷ್ಟ್ರೀಯಬಾಂಗ್ಲಾ ಚುನಾವಣೆ ಹೊತ್ತಲ್ಲೇ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ

ಬಾಂಗ್ಲಾ ಚುನಾವಣೆ ಹೊತ್ತಲ್ಲೇ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ

Another Hindu man killed in Bangladesh in eve of polls , second killing in 48 hours

ಢಾಕಾ, ಫೆ. 12- ಬಾಂಗ್ಲಾದೇಶ ದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.ಬಾಂಗ್ಲಾದೇಶದ ಮೌಲ್ವಿಬಜಾರ್‌ ಜಿಲ್ಲೆಯಲ್ಲಿ ಉದ್ವಿಗ್ನತೆ ಭುಗಿ ಲೆದ್ದಿದ್ದು, ನಿನ್ನೆ 28 ವರ್ಷದ ಹಿಂದೂ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ.

ಕೈಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಆತನ ದೇಹವು ಪತ್ತೆಯಾಗಿದ್ದು, ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿಸಿದೆ. ಮೃತರನ್ನು ರತನ್‌ ಸಾಹುಕರ್‌ ಎಂದು ಗುರುತಿಸ ಲಾಗಿದೆ. ರತನ್‌ ಚಂಪಾ ಪ್ರದೇಶದ ಚಹಾ ತೋಟಗಳಲ್ಲಿ
ಕೆಲಸ ಮಾಡುತ್ತಿದ್ದರು.

ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ಅವರ ಶವ ಪತ್ತೆಯಾಗಿದೆ. ಶವ ಪತ್ತೆಯಾದಾಗ, ರತನ್‌ ಅವರ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಲಾಗಿತ್ತು ಮತ್ತು ಅವರ ದೇಹದಲ್ಲಿ ತೀವ್ರ ಗಾಯಗಳಾಗಿದ್ದವು, ಅದರಿಂದ ವಿಪರೀತ ರಕ್ತಸ್ರಾವವಾಗುತ್ತಿತ್ತು ಎನ್ನಲಾಗಿದೆ.

ರತನ್‌ ಜೊತೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಇದು ಪೂರ್ವನಿಯೋಜಿತ ಕೊಲೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಕೈಕಾಲುಗಳನ್ನು ಕಟ್ಟಲಾಗಿದ್ದ ರೀತಿ ಮತ್ತು ಅವರ ದೇಹದ ಮೇಲಿನ ಗಾಯಗಳು ಇದು ಅಪಘಾತವಲ್ಲ.ಬದಲಾಗಿ ಪಿತೂರಿ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಅವರು ಹೇಳಿದ್ದಾರೆ.

ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕೊಲೆ ಚುನಾವಣೆಗೆ ಸಂಬಂಧಿಸಿದೆಯೇ ಅಥವಾ ಬೇರೆ ಯಾವುದಾದರೂ ಉದ್ದೇಶವಿದೆಯೇ ಎಂದು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಮಯದಲ್ಲಿ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.ಇದೊಂದೇ ಘಟನೆಯಲ್ಲ. ಕೆಲವು ದಿನಗಳ ಹಿಂದೆ, ಮೈಮೆನ್ಸಿಂಗ್‌ ಜಿಲ್ಲೆಯಲ್ಲಿ ಮತ್ತೊಬ್ಬ ಹಿಂದೂ ಉದ್ಯಮಿ ಸುಶೇನ್‌ ಚಂದ್ರ ಸರ್ಕಾರ್‌ (62) ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು ಸುಶೇನ್‌ ಅಕ್ಕಿ ವ್ಯಾಪಾರ ಮಾಡುತ್ತಿದ್ದರು.

ಶೇಖ್‌ ಹಸೀನಾ ಅವರ 15 ವರ್ಷಗಳ ಆಡಳಿತ ಕೊನೆಗೊಂಡ 18 ತಿಂಗಳ ನಂತರ ಈ ಚುನಾವಣೆಗಳು ನಡೆಯುತ್ತಿವೆ.ಪ್ರಸ್ತುತ, ಮೊಹಮ್ಮದ್‌ ಯೂನಸ್‌‍ ನೇತೃತ್ವದ ಮಧ್ಯಂತರ ಸರ್ಕಾರ ದೇಶವನ್ನು ನಡೆಸುತ್ತಿದೆ. ಮೊಹಮ್ಮದ್‌ ಯೂನಸ್‌‍ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಪ್ರಜಾಪ್ರಭುತ್ವ ನಿಯಮಗಳನ್ನು ಅನುಸರಿಸಲು ಮನವಿ ಮಾಡಿದ್ದಾರೆ.

RELATED ARTICLES

Latest News