ಇಸ್ಲಾಮಾಬಾದ್, ಏಪ್ರಿಲ್ 14: ಇರಾನ್ ಮತ್ತು ಅಮೆರಿಕಾ ನಡುವಿನ ಮುಂದಿನ ಸುತ್ತಿನ ಮಾತುಕತೆಗಳು ಶೀಘ್ರದಲ್ಲೇ ನಡೆಯುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ತಿಳಿಸಿದ್ದಾರೆ.ಕಳೆದ ಶನಿವಾರ ನಡೆದ 21 ಗಂಟೆಗಳ ದೀರ್ಘ ಮಾತುಕತೆಗಳು 1979ರ ನಂತರ ಮೊದಲ ಬಾರಿಗೆ ಈ ಮಟ್ಟದ ಉನ್ನತ ಅಧಿಕಾರಿಗಳ ಭಾಗವಹಿಸುವಿಕೆಯಿಂದ ನಡೆದವು ಎಂಬುದು ಗಮನಾರ್ಹ. ಆದರೆ, ಈ ಚರ್ಚೆಗಳ ನಂತರವೂ ಶಾಶ್ವತ ಶಾಂತಿ ಒಪ್ಪಂದಕ್ಕೆ ಎರಡೂ ದೇಶಗಳು ತಲುಪಲು ವಿಫಲವಾದವು. ವಾರಾಂತ್ಯದಲ್ಲಿ ಪಾಕಿಸ್ತಾನದಲ್ಲಿ ನಡೆದ ಈ ಮಾತುಕತೆಗಳು ಉದ್ವಿಗ್ನತೆ ತಗ್ಗಿಸಲು ನೆರವಾದರೂ, ಅಂತಿಮ ಪರಿಹಾರ ಕಂಡುಕೊಳ್ಳಲಾಗಲಿಲ್ಲ. ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಆಸಿಫ್ , ಮಾತುಕತೆಗಳ ನಂತರ ಯಾವುದೇ ನಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿಲ್ಲ ಎಂದು ಹೇಳಿದರು. ಇಲ್ಲಿಯವರೆಗೆ ಕೇವಲ ಧನಾತಕ ಪ್ರಗತಿ ಮಾತ್ರ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು.
ಇದು ರಾಜತಾಂತ್ರಿಕ ಪ್ರಯತ್ನಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಸೂಚಿಸುತ್ತದೆ ಮತ್ತು ಮುಂದಿನ ಸುತ್ತಿನ ಮಾತುಕತೆಗಳು ಶೀಘ್ರದಲ್ಲೇ ನಡೆಯುವ ನಿರೀಕ್ಷೆಯಿದೆ ಎಂದು ಅವರು ಮತ್ತೊಮೆ ಒತ್ತಿಹೇಳಿದರು.
ಪಾಕಿಸ್ತಾನ ಪ್ರದೇಶದ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಆಸಿಫ್, ಅಂತಿಮ ನಿರ್ಧಾರಗಳು ದೇವರ ಕೈಯಲ್ಲಿವೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಮಾತುಕತೆಗಳಲ್ಲಿ ಅಮೆರಿಕಾ ಪ್ರತಿನಿಧಿ ತಂಡವನ್ನು ಉಪಾಧ್ಯಕ್ಷ ಜೆಡಿ ವ್ಯಾನ್‌್ಸನೇತೃತ್ವ ವಹಿಸಿದ್ದರು. ಅವರು ಇರಾನ್ ಅಮೆರಿಕಾದ ಶರತ್ತುಗಳನ್ನು ಅಂಗೀಕರಿಸಲಿಲ್ಲ ಎಂದು ಹೇಳಿದ್ದಾರೆ. ಅಮೆರಿಕಾ ತನ್ನ ಅಂತಿಮ ಮತ್ತು ಅತ್ಯುತ್ತಮ ಪ್ರಸ್ತಾವನೆಅನ್ನು ಮುಂದಿಟ್ಟಿದ್ದರೂ, ಅದನ್ನು ಇರಾನ್ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
