ವಾಷಿಂಗ್ಟನ್,ಏ.14- ಇರಾನ್‌ನ ಎಲ್ಲಾ ಬಂದರುಗಳು ಮತ್ತು ಕರಾವಳಿ ಪ್ರದೇಶಗಳ ಮೇಲೆ ಅಮೆರಿಕ ಸೇನೆ ನಿರ್ಬಂಧ ಹೇರಲಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.ಇದಕ್ಕೆ ಪ್ರತಿಯಾಗಿ ಇರಾನ್, ಪರ್ಷಿಯನ್ ಕೊಲ್ಲಿ ಮತ್ತು ಓಮಾನ್ ಕೊಲ್ಲಿಯಲ್ಲಿರುವ ಬಂದರುಗಳ ಮೇಲೆ ಬೆದರಿಕೆ ಹಾಕಿದೆ.
ಇದಕ್ಕೂ ಮೊದಲು ಟ್ರಂಪ್ ಅವರು ಹೊರ್ಮಜ್ ಜಲಸಂಧಿ ಸಂಪೂರ್ಣವಾಗಿ ಬಂದ್ ಮಾಡುವುದಾಗಿ ಹೇಳಿದ್ದರು.ನಂತರ ಟ್ರಂಪ್, ಇರಾನ್‌ನೊಂದಿಗೆ ಮಾತುಕತೆ ನಡೆಸಲು ತಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಸಾಮಾಜಿಕ ಜಾಲತಾಣದಲ್ಲಿ, ಅಮೆರಿಕದ ನಿರ್ಬಂಧದ ಸಮೀಪಕ್ಕೆ ಬರುವ ಇರಾನ್ ಯುದ್ಧ ನೌಕೆಗಳನ್ನು ನಾಶ ಮಾಡಲಾಗುತ್ತದೆಎ ಂದು ಎಚ್ಚರಿಸಿದ್ದರು.ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ವಿರಾಮ ನಂತರ ಮೊದಲ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿವೆ. ಇದರಿಂದ ಏಪ್ರಿಲ್ 22ರಂದು ಮುಗಿಯಲಿರುವ ಎರಡು ವಾರಗಳ ತಾತ್ಕಾಲಿಕ ಯುದ್ಧ ವಿರಾಮದ ಬಳಿಕ ಪರಿಸ್ಥಿತಿ ಹೇಗಿರಲಿದೆ ಎಂಬುದರ ಬಗ್ಗೆ ಆತಂಕ ಮೂಡಿದೆ.
ಇದೇ ವೇಳೆ, ಇಸ್ರೇಲ್ ಸೇನೆ ದಕ್ಷಿಣ ಲೆಬನಾನ್‌ನಲ್ಲಿ ತನ್ನ ಸೈನಿಕ ಕಾರ್ಯಾಚರಣೆ ಮುಂದುವರಿಸಿಕೊಂಡಿದ್ದು, ಪ್ರಮುಖ ಪಟ್ಟಣಕ್ಕಾಗಿ ಉಗ್ರರೊಂದಿಗೆ ಭಾರೀ ಯುದ್ಧ ನಡೆಯುತ್ತಿದೆ. ಹೆಜ್ಬೊಲ್ಲಾ ಸಂಘಟನೆ ಉತ್ತರ ಇಸ್ರೇಲ್ ಮೇಲೆ ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ಮುಂದುವರಿಸುತ್ತಿದೆ.
