Tuesday, April 14, 2026
Homeರಾಷ್ಟ್ರೀಯಆಟವಾಡುತ್ತಿದ್ದಾಗ ಕುತ್ತಿಗೆಗೆ ಸೀರೆ ಸುತ್ತಿಕೊಂಡು ಬಾಲಕಿ ಸಾವು

ಆಟವಾಡುತ್ತಿದ್ದಾಗ ಕುತ್ತಿಗೆಗೆ ಸೀರೆ ಸುತ್ತಿಕೊಂಡು ಬಾಲಕಿ ಸಾವು

Teen playing on terrace swing dies after neck gets entangled in saree in Gurgaon

ಗುರುಗಾಮ್‌,ಏ.14- ಕಿಟಿಕಿಯ ಗ್ರಿಲ್‌ಗೆ ಸೀರೆ ಕಟ್ಟಿಕೊಂಡು ಆಟವಾಡುತ್ತಿದ್ದಾಗ ಆಕಸಿಕವಾಗಿ ಸೀರೆ ಕತ್ತಿಗೆ ಸುತ್ತಿಕೊಂಡು ಬಿಗಿಯಾದ ಕಾರಣ 13 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಗುರಗ್ರಾಮ್‌ ನಲ್ಲಿ ನಡೆದಿದೆ.

ಸೆಕ್ಟರ್‌ 9ರ ದೇವಿಲಾಲ್‌ ಕಾಲೋನಿಯಲ್ಲಿರುವ ಬಾಡಿಗೆ ಮನೆಯಲ್ಲಿ ತಂದೆತಾಯಿ ವಾಸವಿದ್ದ ಬಾಲಕಿ ಖಾಸಗಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದಳು. ನಿನ್ನೆ ಸಂಜೆ ಸಹೋದರಿಯರೊಂದಿಗೆ ಮನೆಯಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ತಾಯಿಯ ಸೀರೆಯನ್ನು ಕಿಟಕಿ ಕಟ್ಟಿ ಅದನ್ನು ನೂಲುತ್ತಾ ಆಟವಾಡುತ್ತಿದ್ದಳು. ಈ ವೇಳೆ ಸೀರೆಯ ಸೀರೆಯ ಒಂದು ಭಾಗ ಆಕಸಿಕವಾಗಿ ಅವಳ ಕುತ್ತಿಗೆಗೆ ಸುತ್ತಿಕೊಂಡು ಪರಿಣಾಮ ಆಕೆ ತಿರುಗುತ್ತಲೇ ಸೀರೆ ಮತ್ತಷ್ಟು ಬಿಗಿದುಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.

ಜೊತೆಯಲ್ಲಿದ್ದ ಸಹೋದರಿಯರಿಗೆ ಏನಾಯಿತು ಎಂಬುದು ತಕ್ಷಣ ಅರ್ಥವಾಗಿರಲಿಲ್ಲ. ಆಟವಾಡುತ್ತಿದ್ದ ಮಕ್ಕಳು ಮೌನವಾದಾಗ ಮನೆಯಲ್ಲಿದ್ದ ಪೋಷಕರು ನೋಡಿದಾಗ ಕುತ್ತಿಗೆಗೆ ಸೀರೆ ಸುತ್ತಿಕೊಂಡ ಬಾಲಕಿಗೆ ಪ್ರಜ್ಞಾಹೀನಳಾಗಿರುವುದು ಕಂಡುಬಂದಿದೆ.

ಕೂಡಲೇ ಆಕೆಯನ್ನು ಸೆಕ್ಟರ್‌ 10ಎನಲ್ಲಿರುವ ಸಿವಿಲ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ವೈದ್ಯರು ಆಕೆ ಸತ್ತಿರುವುದನ್ನು ದೃಢಪಡಿಸಿದ್ದಾರೆ. ಗುರುಗ್ರಾಮ ಪೊಲೀಸರ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂದೀಪ್‌ ತುರಾನ್‌, ಇದೊಂದು ವಿಲಕ್ಷಣ ಅಪಘಾತ ಎಂದು ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆಯ ಸಂದರ್ಭದಲ್ಲಿ ಯಾವುದೇ ತಪ್ಪಿಲ್ಲ ಎಂದು ಕಂಡುಬಂದಿದೆ ಎಂದು ಅವರು ಹೇಳಿದರು. ತಂದೆಯ ಹೇಳಿಕೆಯ ಆಧಾರದ ಮೇಲೆ, ಸೆಕ್ಟರ್‌ 9 ಎ ಪೊಲೀಸ್‌‍ ಠಾಣೆಯಲ್ಲಿ ಭಾರತೀಯ ನಾಗರಿಕ್‌ ಸುರಕ್ಷಾ ಸಂಹಿತಾದ ಸೆಕ್ಷನ್‌ 194 ರ ಅಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಮಂಗಳವಾರ ಶವಪರೀಕ್ಷೆಯ ನಂತರ ಶವವನ್ನು ಹಸ್ತಾಂತರಿಸಲಾಗುವುದು.

RELATED ARTICLES

Latest News