Saturday, April 18, 2026
Homeಅಂತಾರಾಷ್ಟ್ರೀಯವಿಶ್ವಸಂಸ್ಥೆ ಮುಖ್ಯಸ್ಥರಾಗಿ ಮೊದಲ ಬಾರಿಗೆ ಮಹಿಳೆ ಆಯ್ಕೆ ಸಾಧ್ಯತೆ..?

ವಿಶ್ವಸಂಸ್ಥೆ ಮುಖ್ಯಸ್ಥರಾಗಿ ಮೊದಲ ಬಾರಿಗೆ ಮಹಿಳೆ ಆಯ್ಕೆ ಸಾಧ್ಯತೆ..?

Two women leaders in fray to become next Secretary General of United Nations

ವಿಶ್ವಸಂಸ್ಥೆ,ಏ.7-ಎಂಬತ್ತು ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಸಂಸ್ಥೆಗೆ ಪ್ರಥಮ ಮಹಿಳಾ ಮಹಾಕಾರ್ಯದರ್ಶಿಯನ್ನು ಚುನಾಯಿಸಬೇಕೆಂಬ ಕೂಗಿನ ನಡುವೆ ಇಬ್ಬರು ಮಹಿಳಾ ಧುರೀಣರು ವಿಶ್ವಸಂಸ್ಥೆಯ ಮುಂದಿನ ಮಹಾಕಾರ್ಯದರ್ಶಿ ಸ್ಥಾನದ ಚುನಾವಣಾ ಕಣದಲ್ಲಿದ್ದಾರೆ.

ವಿಶ್ವಸಂಸ್ಥೆಯ ಮುಂದಿನ ಮಹಾ ಕಾರ್ಯದರ್ಶಿಯ ಆಯ್ಕೆ ಪ್ರಕ್ರಿಯೆ ಈ ತಿಂಗಳು ಚಾಲನೆಗೊಂಡಿದ್ದು ನಾಲ್ವರು ನಾಮ ನಿರ್ದೇಶಿತ ಅಭ್ಯರ್ಥಿಗಳು ವಿಶ್ವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಏ.21 ಮತ್ತು 22 ರಂದು ನಡೆಯಲಿರುವ ಸಂವಾದ ಮಾತುಕತೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಪೋರ್ಚುಗಲ್‌ನ ಮಾಜಿ ಪ್ರಧಾನಿ ಮತ್ತು ವಿಶ್ವಸಂಸ್ಥೆಯ ನಿರಾಶ್ರಿತರ ವಿಭಾಗದ ಮಾಜಿ ಹೈಕಮೀಷನರ್‌ ಸಹ ಆಗಿರುವ ವಿಶ್ವಸಂಸ್ಥೆಯ ಪ್ರಸ್ತುತ ಮುಖ್ಯಸ್ಥ ಆಂಟೋನಿಯೋ ಗುಟೆರ್ರೆಸ್‌‍ ಅವರು 2026 ರ ಡಿಸೆಂಬರ್‌ನಲ್ಲಿ ತಮ ಐದು ವರ್ಷಗಳ ಎರಡನೇ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ.

2017ರಲ್ಲಿ ವಿಶ್ವಸಂಸ್ಥೆಯ 9ನೇ ಮಹಾಕಾರ್ಯದರ್ಶಿಯಾಗಿ ಗುಟೆರ್ರೆಸ್‌‍ ಅಧಿಕಾರ ವಹಿಸಿಕೊಂಡಿದ್ದರು. ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದು 80 ವರ್ಷಗಳಾಗಿದ್ದರೂ ಇಲ್ಲಿಯ ತನಕ ಅದು ಮಹಿಳೆಯ ನೇತೃತ್ವ ಪಡೆದಿಲ್ಲ.

ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನಕ್ಕೆ ಚಿಲಿಯ ಮಾಜಿ ಅಧ್ಯಕ್ಷೆ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಮಿಚೆಲ್ಲೆ ಬಾಚೆಲೆಟ್‌, ವಿಶ್ವಸಂಸ್ಥೆ ವ್ಯಾಪಾರ ಮತ್ತು ಅಭಿವೃದ್ಧಿ ಸಮೇಳನ (ಯುಎನ್‌ಸಿಟಿಎಡಿ) ದ ಪ್ರಧಾನ ಕಾರ್ಯದರ್ಶಿ ಮತ್ತು ಕೋಸ್ಟಾರಿಕಾದ ಮಾಜಿ ಉಪಾಧ್ಯಕ್ಷೆ ರೆಬೆಕಾ ಗ್ರಿನ್‌್ಸಪ್ಯಾನ್‌, ಅಂತರಾಷ್ಟ್ರೀಯ ಅಣು ಇಂಧನ ಸಂಸ್ಥೆಯ ಮುಖ್ಯಸ್ಥ ರಾಫೆಲ್‌ ಗ್ರಾಸ್ಸಿ ಮತ್ತು ಸೆನೆಗಲ್‌ನ ಮಾಜಿ ಅಧ್ಯಕ್ಷ ಮ್ಯಾಕಿ ಸಾಲ್‌ ಅವರು ಸ್ಪರ್ಧಿಸುತ್ತಿದ್ದಾರೆ.

ಬಾಚೆಲೆಟ್‌ ಅವರು ಬ್ರೆಜಿಲ್‌ ಮತ್ತು ಮೆಕ್ಸಿಕೋದಿಂದ, ಗ್ರಿನ್‌್ಸಪ್ಯಾನ್‌ ಕೋಸ್ಟಾರಿಕಾದಿಂದ, ಗ್ರಾಸ್ಸಿ ಅರ್ಜೆಂಟೀನಾದಿಂದ ಮತ್ತು ಸಾಲ್‌ ಬುರುಂಡಿ ದೇಶಗಳಿಂದ ನಾಮ ನಿರ್ದೇಶನಗೊಂಡಿದ್ದಾರೆ.
ಏ.21 ಮತ್ತು 22 ರಂದು ಪ್ರತಿಯೊಬ್ಬ ಅಭ್ಯರ್ಥಿಗೆ ಮೂರು ಗಂಟೆಗಳ ಸಂವಾದ ಮಾತುಕತೆ ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವಸಂಸ್ಥೆ ಜನರಲ್‌ ಅಸೆಂಬ್ಲಿಯ ಅಧ್ಯಕ್ಷರ ಕಚೇರಿಯ ಅಧಿಕಾರಿ ಅನ್ನಾಲೆನಾ ಬೇರ್‌ಬಾಕ್‌ ಅವರು ತಿಳಿಸಿದರು.

ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯನ್ನು 193 ಸದಸ್ಯರ ಜನರಲ್‌ ಅಸೆಂಬ್ಲಿಯು 15 ರಾಷ್ಟ್ರಗಳ ಸದಸ್ಯರಿರುವ ಭದ್ರತಾ ಮಂಡಳಿಯ ಶಿಫಾರಸಿನ ಮೇರೆಗೆ ನೇಮಕ ಮಾಡುತ್ತದೆ. ಭದ್ರತಾ ಮಂಡಳಿಯಲ್ಲಿ ಚೀನಾ, ಫ್ರಾನ್‌್ಸ,ರಷ್ಯಾ, ಬ್ರಿಟನ್‌ ಮತ್ತು ಅಮೆರಿಕ ಖಾಯಂ ಪ್ರತಿನಿಧಿಗಳಾಗಿದ್ದು, ವಿಟೋ ಅಧಿಕಾರ ಹೊಂದಿರುವ ರಾಷ್ಟ್ರಗಳಾಗಿವೆ.

RELATED ARTICLES

Latest News