Tuesday, April 14, 2026
Homeಅಂತಾರಾಷ್ಟ್ರೀಯಇಸ್ರೇಲ್‌ನಿಂದ ಶಾಂತಿ ಮಾತುಕತೆ ಭಂಗ : ಇರಾನ್‌

ಇಸ್ರೇಲ್‌ನಿಂದ ಶಾಂತಿ ಮಾತುಕತೆ ಭಂಗ : ಇರಾನ್‌

US and Iran fail to reach a deal after marathon talks in Pakistan

ಟೆಹ್ರಾನ್‌, ಏ.13- ಪಾಕ್‌ನಲ್ಲಿ ನಡೆಯುತ್ತಿದ್ದ ಸಂಧಾನ ಸಭೆ ವಿಫಲವಾಗಲು ಇಸ್ರೇಲ್‌ ಕಾರಣ ಎಂದು ಇರಾನ್‌ ಆರೋಪಿಸಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಮಾತುಕತೆ ವಿಫಲವಾಗಲು ಇಸ್ರೇಲ್‌ ಪ್ರಧಾನಿ ಕಾರಣ ಎಂದು ಇರಾನ್‌ ಹೊಸ ಬಾಂಬ್‌ ಸಿಡಿಸಿದೆ.

ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್‌್ಸಗೆ ಫೋನ್‌ ಕಾಲ್‌ ಮಾಡಿದ್ದರು. ಆ ಫೋನ್‌ ಕಾಲ್‌ ಬಳಿಕ ಮಾತುಕತೆ ಹಳಿತತಪ್ಪಿತು ಎನ್ನುವುದು ಇರಾನ್‌ ಆರೋಪವಾಗಿದೆ.

ಅಮೆರಿಕ ಬಿಕ್ಕಟ್ಟಿನಲ್ಲಿ ಕಾಣುತ್ತಿದ್ದ ಪ್ರಗತಿಯನ್ನು ಇಸ್ರೇಲ್‌ ಹಾಳುಮಾಡಿತು ಎಂದು ಇರಾನ್‌ನ ವಿದೇಶಾಂಗ ಸಚಿವ ಸಯ್ಯದ್‌ ಅಬ್ಬಾಸ್‌‍ ಅರಾಘ್ಚಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಯುದ್ಧದ ಮೂಲಕ ಸಾಧಿಸಲು ಸಾಧ್ಯವಾಗದ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಅಮೆರಿಕ ಪ್ರಯತ್ನಿಸಿತ್ತು. ಆದರೆ, ಸಭೆ ನಡೆಯುತ್ತಿದ್ದಾಗ ನೆತನ್ಯಾಹು, ವ್ಯಾನ್‌್ಸಗೆ ಕರೆ ಮಾಡಿ, ಅಮೆರಿಕ-ಇರಾನ್‌ ಮಾತುಕತೆಗಳಿಂದ ಗಮನವನ್ನ ಇಸ್ರೇಲ್‌ ಹಿತಾಸಕ್ತಿಗಳತ್ತ ಸೆಳೆದರು ಎನ್ನಲಾಗಿದೆ.

ವ್ಯಾನ್‌್ಸ ಇಸ್ಲಾಮಾಬಾದ್‌ನಿಂದ ನಿರ್ಗಮಿಸುವುದಕ್ಕೂ ಮುನ್ನ ನಡೆಸಿದ್ದ ಸುದ್ದಿಗೋಷ್ಠಿ ಅನಗತ್ಯವಾಗಿತ್ತು ಎಂದ ಅರಾಘ್ಚಿ ಹೇಳಿದ್ದಾರೆ. ಇರಾನ್‌ ತನ್ನ ರಾಷ್ಟ್ರದ ಹಿತಾಸಕ್ತಿ ಮತ್ತು ಸಾರ್ವಭೌಮತ್ವ ಕಾಪಾಡಲು ಸಿದ್ಧ ಮತ್ತು ಬದ್ಧವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದ್ದಾರೆ.

RELATED ARTICLES

Latest News