Monday, May 4, 2026
Homeರಾಷ್ಟ್ರೀಯತಮಿಳುನಾಡಿನಲ್ಲಿ ಡಿಎಂಕೆಗೆ ಮುಳುವಾದ ಹಿಂದೂ ವಿರೋಧಿ ಧೋರಣೆ

ತಮಿಳುನಾಡಿನಲ್ಲಿ ಡಿಎಂಕೆಗೆ ಮುಳುವಾದ ಹಿಂದೂ ವಿರೋಧಿ ಧೋರಣೆ

Anti-Hindu sentiments engulfing DMK in Tamil Nadu

ಚೆನ್ನೈ, ಮೇ 4 (ಪಿಟಿಐ) ಹಿಂದೂಗಳ ಅಪಮಾನವೇ ಆಡಳಿತಾರೂಢ ಡಿಎಂಕೆಗೆ ಮುಳುವಾಯಿತು ಎಂಬ ಮಾತುಗಳು ತಮಿಳುನಾಡಿನಲ್ಲಿ ಕೇಳಿ ಬರುತ್ತಿದೆ. ಪಕ್ಕ ನಾಸ್ತಿಕವಾದಿ ಪಕ್ಷವಾಗಿ ಗುರುತಿಸಿಕೊಂಡಿರುವ ಡಿಎಂಕೆ ಎಂದಿಗೂ ಹಿಂದೂಗಳ ವಿರೋಧ ಕಟ್ಟಿ ಕೊಳ್ಳದೆ ಎಲ್ಲ ಜನಾಂಗದವರನ್ನು ಒಟ್ಟಿಗೆ ಕರೆದೊಯ್ಯುತಿದ್ದ ಪಕ್ಷವಾಗಿತ್ತು. ಆದರೆ, ಇತ್ತಿಚೆಗೆ ಸಿಎಂ ಸ್ಟಾಲಿನ್‌ ಅವರ ಪುತ್ರ ಉದಯ ನಿಧಿಸ್ಟಾಲಿನ್‌ ಅವರು ಹಿಂದೂಗಳ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದರು.

ಅವರ ಹೇಳಿಕೆಯನ್ನು ಹಲವಾರು ಹಿಂದೂ ಪರ ಸಂಘಟನೆಗಳು ಖಂಡಿಸಿದ್ದರೂ ಅವರು ಕ್ಷಮೆ ಕೇಳಲು ಹಿಂದೇಟು ಹಾಕಿದ್ದೇ ಅಲ್ಲದೆ, ತಮ ಧೋರಣೆ ಬದಲಿಸಿಕೊಳ್ಳದೆ ಹಿಂದೂ ವಿರೋಧಿ ಧೋರಣೆ ಮುಂದುವರೆಸಿದ್ದೇ ಅವರಿಗೆ ಮುಳುವಾಯಿತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇಡಿ ದೇಶದಲ್ಲೇ ಅತ್ಯಂತ ಹೆಚ್ಚು ದೇವಾಲಯಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಅಸಂಖ್ಯಾತ ಹಿಂದೂಗಳು ವಾಸಿಸುತ್ತಿದ್ದಾರೆ. ಅವರ ಜೊತೆಗೆ ಕ್ರಿಶ್ಚಿಯನ್‌, ಇಸ್ಲಾಂ ಧರ್ಮದವರು ಸೇರಿದಂತೆ ಅತ್ಯಂತ ಹಿಂದುಳಿದ ಜನಾಂಗದವರು ಇದ್ದಾರೆ.

ಹೀಗಾಗಿ ನಾಸ್ತಿಕವಾದಿಗಳೇ ಆದ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಹಾಗೂ ಅವರ ಪುತ್ರ ಸ್ಟಾಲಿನ್‌ ಅವರಿಗೆ ತಮಿಳುನಾಡಿನ ಜನ ಮಣೆ ಹಾಕುತ್ತಲೆ ಬಂದಿದ್ದರು. ಆದರೆ, ಈ ಬಾರಿ ಸ್ಟಾಲಿನ್‌ ಅವರ ಪುತ್ರ ಉದಯನಿಧಿ ನೀಡಿದ ಹಿಂದೂ ವಿರೋಧಿ ಹೇಳಿಕೆ ಅಲ್ಲಿನ ಹಿಂದೂಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ಅಂದಾಜಿಸಲಾಗಿದೆ.

ಹೀಗಾಗಿ ಇದುವರೆಗೂ ಡಿಎಂಕೆ ಮತ್ತು ಅಣ್ಣಾ ಡಿಎಂಕೆ ಪಕ್ಷಗಳಿಗೆ ಮತ ಹಾಕುತ್ತಿದ್ದ ತಮಿಳುನಾಡು ಮತದಾರರು ಈ ಬಾರಿ ಹೊಸ ಪ್ರಯೋಗದತ್ತ ಮನಸ್ಸು ಮಾಡಿದ ಪರಿಣಾಮವೇ ದಳಪತಿ ವಿಜಯ್‌ ನೇತೃತ್ವದ ಟಿವಿಕೆ ಪಕ್ಷಕ್ಕೆ ಮತಗಳಾಗಿ ಪರಿಣಮಿಸಿವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

Latest News