Homeರಾಷ್ಟ್ರೀಯಜಿರಲೆಗಳ ನಾಳೆಯ ಜಂತರ್ ಮಂತರ್‌ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು

ಜಿರಲೆಗಳ ನಾಳೆಯ ಜಂತರ್ ಮಂತರ್‌ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು

ನವದೆಹಲಿ,ಅ.9- ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಒತ್ತಾಯಿಸಿ ಜಿರಳೆ ಜನತಾ ಪಕ್ಷ (ಸಿಜೆಪಿ) ಶನಿವಾರ ಜಂತರ್‌ ಮಂತರ್‌ನಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ನಿಗದಿತ ನಿಯಮಗಳನ್ನು ಪಾಲಿಸದಿರುವುದು ಮತ್ತು ರಾಜಧಾನಿಯಲ್ಲಿ ಜಾರಿಯಲ್ಲಿರುವ ಕಾನೂನು ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಜಧಾನಿಯ ಸಾರಿಗೆ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಗಳನ್ನು ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ ಜಂಟಿ ಪೊಲೀಸ್‌‍ ಆಯುಕ್ತ ನೂಪುರ್‌ ಪ್ರಸಾದ್‌, ಸಿಜೆಪಿ ಸಹ-ಸಂಚಾಲಕ ಸೌರವ್‌ ದಾಸ್‌‍ ಅವರಿಂದ ಅಕ್ಟೋಬರ್‌ 10 ರ ಪ್ರತಿಭಟನೆಗೆ ಸಂಬಂಧಿಸಿದಂತೆ ಅರ್ಜಿ ಬಂದಿತ್ತು. ಆದರೆ ನಿಯಮಗಳ ಪ್ರಕಾರ ಪ್ರತಿಭಟನೆಗೆ ಕನಿಷ್ಠ 10 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಿತ್ತು. ಅಲ್ಪಾವಧಿಯ ಸೂಚನೆ ನೀಡಿರುವುದರಿಂದ ಅನುಮತಿ ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಯಾವುದೇ ಬೃಹತ್‌ ಪ್ರತಿಭಟನೆಗೆ 10 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯ. ಆದರೆ ಸಿಜೆಪಿ ಅತ್ಯಂತ ಕಡಿಮೆ ಅವಧಿಯಲ್ಲಿ ಮನವಿ ಸಲ್ಲಿಸಿದೆ.

ನಿಯಮಗಳ ಪ್ರಕಾರ ಯಾವುದೇ ಬೃಹತ್‌ ಪ್ರತಿಭಟನೆಗೆ ಕನಿಷ್ಠ 10 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಆದರೆ, ಸಿಜೆಪಿಯ ಸೌರವ್‌ ದಾಸ್‌‍ ಅವರು ಬುಧವಾರವಷ್ಟೇ ಅರ್ಜಿ ಸಲ್ಲಿಸಿರುವುದರಿಂದ ನಿಗದಿತ ಸಮಯಾವಕಾಶದ ಅಭಾವದಿಂದ ಅನುಮತಿ ನಿರಾಕರಿಸಲಾಗಿದೆ ಎಂದು ದೆಹಲಿ ಪೊಲೀಸ್‌‍ ಆಯುಕ್ತ ನೂಪುರ್‌ ಪ್ರಸಾದ್‌ ತಿಳಿಸಿದ್ದಾರೆ. ಅಲ್ಲದೆ, ಈ ಹಿಂದೆ ಸಿಜೆಪಿ ಪ್ರತಿಭಟನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಇತಿಹಾಸವಿದ್ದು, ನಿಯಮ ಮೀರಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಸೂಕ್ಷ್ಮ ಪ್ರದೇಶಗಳತ್ತ ಅನಿಯಂತ್ರಿತ ಜನಸ್ತೋಮ ಹರಿಯುವುದನ್ನು ತಡೆಯಲು ಮಧ್ಯ ದೆಹಲಿಗೆ ಸಂಪರ್ಕ ಕಲ್ಪಿಸುವ ಕನಿಷ್ಠ 57 ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಇಂದು ರಾತ್ರಿ 9 ಗಂಟೆಯಿಂದ ಶನಿವಾರ ಪರಿಸ್ಥಿತಿ ತಿಳಿಯಾಗುವವರೆಗೆ ಮುಚ್ಚುವಂತೆ ಜಂಟಿ ಪೊಲೀಸ್‌‍ ಆಯುಕ್ತ (ಸಾರಿಗೆ) ರಜನೀಶ್‌ ಗುಪ್ತಾ ಸೂಚಿಸಿದ್ದಾರೆ. ಅಲ್ಲದೆ, ಈ ಮಾರ್ಗಗಳಲ್ಲಿ ರೈಲುಗಳ ಆವರ್ತನವನ್ನು ಕಡಿಮೆಗೊಳಿಸಲಾಗುತ್ತಿದೆ.

ನವದೆಹಲಿ ಮತ್ತು ಹಜರತ್‌ ನಿಜಾಮುದ್ದೀನ್‌ ರೈಲು ನಿಲ್ದಾಣಗಳ ಸುತ್ತಮುತ್ತ ತೀವ್ರ ದಟ್ಟಣೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವ ಮುನ್ನೆಚ್ಚರಿಕೆಯಿಂದ ರೈಲ್ವೆ ಇಲಾಖೆಯು ತುರ್ತು ಯೋಜನೆ ರೂಪಿಸಿದೆ. ಇಂದು ಬೆಳಿಗ್ಗೆ 4 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ನಿಲ್ದಾಣಗಳಿಗೆ ಆಗಮಿಸಬೇಕಿದ್ದ ಹಾಗೂ ಮಧ್ಯಾಹ್ನ 2 ಗಂಟೆಯ ನಂತರ ಹೊರಡಬೇಕಿದ್ದ ಹಲವು ಮೇಲ್‌ ಮತ್ತು ಎಕ್ಸ್ ಪ್ರೆಸ್‌‍ ರೈಲುಗಳನ್ನು ಮೂಲದಲ್ಲೇ ರದ್ದುಗೊಳಿಸಲಾಗಿದೆ.

ಇತ್ತೀಚೆಗೆ ನವದೆಹಲಿ ನಿಲ್ದಾಣದಲ್ಲಿ ಟ್ರಾಫಿಕ್‌ನಿಂದಾಗಿ ಸುಮಾರು 5,000 ಪ್ರಯಾಣಿಕರು ರೈಲು ತಪ್ಪಿಸಿಕೊಂಡು ಪ್ಲಾಟ್‌ಫಾರ್ಮ್‌ಗಳಲ್ಲೇ ಉಳಿದುಕೊಂಡಿದ್ದ ಘಟನೆಯನ್ನು ಗಂಭೀರವಾಗಿ ಗಣಿಸಿ ರೈಲ್ವೆ ಈ ತೀರ್ಮಾನ ಕೈಗೊಂಡಿದೆ. ದೆಹಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಪ್ರಯಾಣಿಕರು ಸಂಚಾರ ಸಲಹೆಗಳನ್ನು ಪರಿಶೀಲಿಸಿ ಪ್ರಯಾಣ ಬೆಳೆಸಲು ಕೋರಲಾಗಿದೆ.

ಪ್ರಸ್ತುತ ನವದೆಹಲಿ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್‌ 163 ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಸಾರ್ವಜನಿಕ ಸುರಕ್ಷತೆ ಹಾಗೂ ಸಂಚಾರ ನಿಯಂತ್ರಣಕ್ಕೆ ಆದ್ಯತೆ ನೀಡಲಾಗಿದೆ.ಕಾನೂನು ಮತ್ತು ನಿಷೇಧಾಜ್ಞೆಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಲು ಯತ್ನಿಸಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸರು ಎಚ್ಚರಿಸಿದ್ದಾರೆ.

ಚುನಾವಣಾ ಆಯೋಗದ ಖಐ್ಕ ಪ್ರಕ್ರಿಯೆಯ ಬಗ್ಗೆ ಕಳೆದ 10 ತಿಂಗಳುಗಳಲ್ಲಿ ಇಬ್ಬರು ಚುನಾವಣಾ ಆಯುಕ್ತರು 14 ಬಾರಿ ಆಕ್ಷೇಪಣೆಗಳನ್ನು ಎತ್ತಿದ್ದಾರೆ ಎಂಬ ಮಾಧ್ಯಮ ವರದಿಗಳು ಹೊರಬಿದ್ದ ನಂತರ ಈ ವಿವಾದ ತೀವ್ರಗೊಂಡಿದೆ. ಆಯೋಗವು ಈ ಆರೋಪಗಳನ್ನು ತಳ್ಳಿಹಾಕಿದ್ದರೂ, ಸಿಜೆಪಿ ರಾಷ್ಟ್ರವ್‌ಯಾಪಿ ಹೋರಾಟಕ್ಕಿಳಿದಿದೆ.

ಅಕ್ಟೋಬರ್‌ 3 ರಂದು ಮುಂಬೈ ಹಾಗೂ ಗುರುವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ ಸಿಜೆಪಿಗೆ ಜಂತರ್‌ ಮಂತರ್‌ನಲ್ಲಿ ನಡೆಯಲಿದ್ದದ್ದು ಮೂರನೇ ಬೃಹತ್‌ ಪ್ರತಿಭಟನೆಯಾಗಿದೆ. ಈ ಹಿಂದೆ ಜುಲೈನಲ್ಲಿ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಸಿಜೆಪಿ ನಡೆಸಿದ್ದ 36 ದಿನಗಳ ಸುದೀರ್ಘ ಪ್ರತಿಭಟನೆಯು ಮಾಜಿ ಶಿಕ್ಷಣ ಸಚಿವರ ರಾಜೀನಾಮೆಯಲ್ಲಿ ಅಂತ್ಯಗೊಂಡಿದ್ದನ್ನು ಇಲ್ಲಿ ಸರಿಸಬಹುದು.

RELATED ARTICLES
spot_img

Latest News