ನವದೆಹಲಿ, ಮೇ 7- ಪ್ರಸಕ್ತ ಐಪಿಎಲ್ ಟೂರ್ನಿಯ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್್ಸ ನಾಯಕನಾಗಿ ರೋಹಿತ್ ಶರ್ಮಾ ಮರಳಿ ಬರುವ ಸಾಧ್ಯತೆಗಳಿವೆ. ಬೆನ್ನು ನೋವಿನಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೆಲವು ಪಂದ್ಯಗಳಿಂದ ಬಿಡುವು ಪಡೆದಿರುವುದರಿಂದ ಎಲ್ಎಸ್ಜಿ ತಂಡದ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ತಂಡವನ್ನು ಮುನ್ನಡೆಸಿದ್ದರು.
ಈಗ ಸೂರ್ಯಕುಮಾರ್ ಯಾದವ್ ಅವರು ಮಗುವಿನ ನಿರೀಕ್ಷೆಯಲ್ಲಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅವರು ಅಲಭ್ಯರಾಗಲಿದ್ದು, ತಂಡಕ್ಕೆ 5 ಬಾರಿ ಚಾಂಪಿಯನ್ಪಟ್ಟ ದಕ್ಕಿಸಿಕೊಟ್ಟಿರುವ ರೋಹಿತ್ ತಂಡದ ನಾಯಕರಾಗುವ ಸಾಧ್ಯತೆಗಳಿವೆ.
ದೇವದತ್ ಪಡಿಕ್ಕಲ್ ಇನ್ನಿಂಗ್ಸ್ ಆರಂಭಿಸಲಿ :
ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿಯೊಂದಿಗೆ ದೇವದತ್ ಪಡಿಕ್ಕಲ್ ಅವರು ಇನ್ನಿಂಗ್್ಸ ಆರಂಭಿಸಬೇಕು ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ ಕೆಲವು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಮಸ್ಯೆ ಎದುರಿಸುತ್ತಿದ್ದು, ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಜೇಕಬ್ ಬೇಥಲ್ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಿ ಪಡಿಕ್ಕಲ್ರನ್ನು ಆರಂಭಿಕನಾಗಿ ಕಣಕ್ಕಿಳಿಸಬೇಕು ಎಂದು ಶ್ರೀಕಾಂತ್ ಹೇಳಿದ್ದಾರೆ.
