Homeಕ್ರೀಡಾ ಸುದ್ದಿನಿವೃತ್ತಿ ಘೋಷಿಸಿದ ಖ್ಯಾತ ಬ್ಯಾಡಿಂಟನ್‌ ತಾರೆ ಸೈನಾ ನೆಹ್ವಾಲ್‌

ನಿವೃತ್ತಿ ಘೋಷಿಸಿದ ಖ್ಯಾತ ಬ್ಯಾಡಿಂಟನ್‌ ತಾರೆ ಸೈನಾ ನೆಹ್ವಾಲ್‌

Saina Nehwal confirms retirement from competitive badminton

ಹೈದರಾಬಾದ್‌,ಜ.20-ಭಾರತದ ಖ್ಯಾತ ಬ್ಯಾಡಿಂಟನ್‌ ತಾರೆ ಸೈನಾ ನೆಹ್ವಾಲ್‌ ಅವರು ಅಂತರರಾಷ್ಟೀಯ ಪಂದ್ಯಾವಳಿಗೆ ನಿವೃತ್ತಿ ಘೋಷಿಸಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇದೀಗ ಬ್ಯಾಡ್ಮಿಂಟನ್‌ ಅಂಗಳಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
ಅಚ್ಚರಿಯಂಬಂತೆ ಇನುಂದೆ ಸ್ಪರ್ಧಾತಕ ಬ್ಯಾಡಿಂಟನ್‌ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಸಹ ಸ್ಪಷ್ಟಪಡಿಸಿದ್ದಾರೆ.

ಸೈನಾ ನೆಹ್ವಾಲ್‌ ಅವರು ಕಳೆದ 2023 ರಲ್ಲಿ. 2023ರ ಸಿಂಗಾಪುರ್‌ ಓಪನ್‌ ನಂತರ ಯಾವುದೇ ಸ್ಪರ್ಧಾತಕ ಪಂದ್ಯವಾಡಿಲ್ಲ,ಇದಕ್ಕೆ ಗಾಯದ ಸಮಸ್ಯೆಯೇ ಮುಖ್ಯ ಕಾರಣ ಎನ್ನಲಾಗಿದೆ.

ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಎರಡು ವರ್ಷಗಳಿಂದ ಆಟಕ್ಕೆ ಮರಳಲು ಸತತ ಪ್ರಯತ್ನ ಮಾಡಿದ್ದರು ಇದಾಗ್ಯೂ ಸಂಪೂರ್ಣ ಚೇತರಿಗೆ ಸಾಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ವರ್ಷದ ಆರಂಭದಲ್ಲೇ ಸೈನಾ ನೆಹ್ವಾಲ್‌ ಬ್ಯಾಡಿಂಟನ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸೈನಾ ನೆಹ್ವಾಲ್‌‍, ತನ್ನ ದೇಹವು ಸ್ಪಂದಿಸುತ್ತಿಲ್ಲ ಹೀಗಾಗಿ ಬ್ಯಾಡಿಂಟನ್‌ನಲ್ಲಿ ಇನುಂದೆ ಮುಂದುವರೆಯಲು ಸಾಧ್ಯವಿಲ್ಲ. ಮೊಣಕಾಲಿನ ನೋವಿನ ಸಮಸ್ಯೆಯಿರುವ ಕಾರಣ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಎಂದು 35 ವರ್ಷದ ಸೈನಾ ನೆಹ್ವಾಲ್‌ ಹೇಳಿದ್ದಾರೆ.

18 ಪದಕಗಳ ರಾಣಿ:
ಸೈನಾ ನೆಹ್ವಾಲ್‌ 2012ರ ಲಂಡನ್‌ ಒಲಿಂಪಿಕ್‌್ಸನಲ್ಲಿ ಕಂಚಿನ ಪದಕ ಗೆದ್ದಿದ್ದಲ್ಲದೆ, ಇತರ ಬ್ಯಾಡಿಂಟನ್‌ ಸ್ಪರ್ಧೆಗಳಲ್ಲಿ ಹಲವಾರು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು. ಈ ಮೂಲಕ ತಮ ವೃತ್ತಿಜೀವನದಲ್ಲಿ ಒಟ್ಟು 18 ಪದಕಗಳನ್ನು ಗೆದ್ದಿದ್ದಾರೆ.

ವಿಶ್ವ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಮತ್ತು ಕಂಚು ಪದಕಗಳನ್ನು ಗೆಲ್ಲುವ ಮೂಲಕ ಅಭಿಯಾನ ಆರಂಭಿಸಿದ್ದ ಸೈನಾ ನೆಹ್ವಾಲ್‌‍ ನಂತರ ತಿರುಗಿ ನೋಡಲಿಲ್ಲ .ಕಳೆದ 2015 ರಲ್ಲಿ ವಿಶ್ವದ ನಂ.1 ಸ್ಥಾನ ಪಡೆದು ಭಾರತಕ್ಕೆ ಕೀರ್ತಿ ತಂದಿದ್ದ ಆಕೆ ಬ್ಯಾಡಿಂಟನ್‌ ತಾರೆಯಾಗಿ ಹೊರಹೊಮಿದ್ದರು.

2009 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2010 ರಲ್ಲಿ ಮೇಜರ್‌ ಧ್ಯಾನ್‌ ಚಂದ್‌ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. 2010 ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದಭೂಷಣ ಪ್ರಶಸ್ತಿಗಳನ್ನು ಸಹ ಸ್ವೀಕರಿಸಿದ್ದರು. ಇದೀಗ 35ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸುವ ಮೂಲಕ ಸೈನಾ ನೆಹ್ವಾಲ್‌ ಆಟದ ಮೊದಲ ಇನಿಂಗ್‌್ಸ ಮುಗಿಸಿದ್ದಾರೆ.

RELATED ARTICLES

Latest News