Saturday, April 18, 2026
Homeರಾಜ್ಯಒಂದೇ ದಿನ ದಂಪತಿ ಸಾವು : ಅನಾಥರಾದ ಮೂರು ಮಕ್ಕಳು

ಒಂದೇ ದಿನ ದಂಪತಿ ಸಾವು : ಅನಾಥರಾದ ಮೂರು ಮಕ್ಕಳು

Couple dies on the same day: Three children orphaned

ಬೆಳಗಾವಿ,ಏ.6- ನಗರದ ಲ್ಲೊಂದು ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಪತ್ನಿಯ ಸಾವಿನ ಸುದ್ದಿ ತಿಳಿದು ಬೈಕ್‌ನಲ್ಲಿ ಬರುತ್ತಿದ್ದ ಪತಿ ಬಸ್‌‍ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದು, ಮೂವರು ಮಕ್ಕಳು ಅನಾಥರಾಗಿ ದ್ದಾರೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಅರವಳ್ಳಿ ಗ್ರಾಮದ ಮಧುರಾ (30) ಹಾಗೂ ಕರೆಪ್ಪ (36) ಮೃತಪಟ್ಟ ದಂಪತಿ. ಒಂಬತ್ತು ವರ್ಷದ ಹಿಂದೆ ಮಧುರಾ ಅವರನ್ನು ಕರೆಪ್ಪ ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದು, ಸುಂದರ ಕುಟಂಬವಾಗಿತ್ತು. ಹಲವು ವರ್ಷಗಳಿಂದ ಮಧುರಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದಕ್ಕೆ ಚಿಕಿತ್ಸೆಯೂ ಪಡೆದಿದ್ದರು. ಆದರೆ ಹೊಟ್ಟೆ ನೋವು ಕಡಿಮೆಯಾಗಿರಲಿಲ್ಲ.

ನಿನ್ನೆ ದಂಪತಿ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ ಹೊಸ ಬಟ್ಟೆ ಕೊಡಿಸಿದ್ದಾರೆ.
ಇಂದು ಬೆಳಗ್ಗೆ ಮಧುರಾ ಅವರಿಗೆ ತೀವ್ರವಾಗಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಇದರಿಂದ ಮನನೊಂದು ಅವರು ಆತಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಕ್ರಿಮಿನಾಶಕ ಮಾತ್ರೆ ಸೇವಿಸಿ ಅಸ್ವಸ್ಥರಾಗಿದ್ದಾರೆ. ಇದನ್ನು ಗಮನಿಸಿದ ಕುಟುಂಬ ದವರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯು ತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಪತ್ನಿ ಸಾವಿನ ವಿಷಯವನ್ನು ಹೊರಗೆ ಹೋಗಿದ್ದ ಪತಿ ಕರೆಪ್ಪಗೆ ತಿಳಿಸಿದ್ದಾರೆ. ಇದರಿಂದ ಅಘಾತಗೊಂಡು ಕರೆಪ್ಪ ಅವರು ಬೈಕ್‌ನಲ್ಲಿ ಬರುತ್ತಿದ್ದಾಗ ಮಾರ್ಗ ಮಧ್ಯೆ ಬಸ್‌‍ ಡಿಕ್ಕಿ ಹೊಡೆದಿದ್ದು, ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಒಂದೇ ದಿನ ದಂಪತಿ ಸಾವನ್ನಪ್ಪಿರುವುದು ಕುಟುಂಬ ದವರಿಗೆ ಬರಸಿಡಿಲು ಬಡಿದಂ ತಾಗಿದೆ. ಗ್ರಾಮದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.ಸುದ್ದಿ ತಿಳಿದು ಬೈಲಹೊಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News