Homeರಾಜ್ಯಪರಿಪರಿಯಾಗಿ ಬೇಡಿಕೊಂಡರೂ ಬಿಡದೇ ಪತ್ನಿನ್ನು ರುಬ್ಬುಕಲ್ಲಿನಿಂದ ಹೊಡೆದು ಕೊಂದಿದ್ದ ಇಂದುಶೇಖರ್‌

ಪರಿಪರಿಯಾಗಿ ಬೇಡಿಕೊಂಡರೂ ಬಿಡದೇ ಪತ್ನಿನ್ನು ರುಬ್ಬುಕಲ್ಲಿನಿಂದ ಹೊಡೆದು ಕೊಂದಿದ್ದ ಇಂದುಶೇಖರ್‌

ಬೆಂಗಳೂರು,ನ.19-ಅಯ್ಯೋ ನನಗೇಕೆ ಹೊಡೆಯುತ್ತಿದ್ದೀರಿ ಬಿಟ್ಬಿಡಿ ಅಂತ ಬೇಡಿಕೊಂಡರೂ ನರಹಂತಕನ ಮನಸ್ಸು ಕರಗದೇ ತನ್ನ ಪತ್ನಿ ಸುನಿತಾಳನ್ನು ಭೀಕರವಾಗಿ ಕೊಲೆ ಮಾಡಿರುವುದು ಪೊಲೀಸರ ಇದುವರೆಗಿನ ತನಿಖೆಯಿಂದ ತಿಳಿದು ಬಂದಿದೆ.

ತನ್ನ ಹೆತ್ತ ತಾಯಿಯ ಜೀವ ಕಣ್ಣೆದುರೇ ಹೋದರೂ ಪಾಪಿಯ ಮಗಳು ಮೌನವಾಗಿದ್ದುದ್ದೇ ಆಶ್ಚರ್ಯವಾಗಿದೆ.ತನ್ನ ತಾಯಿ ಕುಟುಂಬದ ಏಳು ಮಂದಿಯನ್ನು ಭೀಕರವಾಗಿ ಕೊಲೆ ಮಾಡಿದ ಕಟುಕ ಇಂದುಶೇಖರ್‌ನ ಮಗಳ ಮನಸ್ಸು ಕರಗಲಿಲ್ಲ. ತಾಯಿ ಸುನಿತಾ ಕಣ್ಣೆದುರೇ ನರಳಿ ಪ್ರಾಣ ಬಿಟ್ಟರೂ ಮಗಳು ಕಣ್ಣೀರು ಹಾಕದೆ ನಿಂತಿದ್ದಳು ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಬಯಲಾಗಿದೆ.

ಆರೋಪಿ ಇಂದುಶೇಖರ್‌ನ ವಿಚಾರಣೆ ವೇಳೆ ಹಲವು ಪ್ರಮುಖ ಮಾಹಿತಿಗಳು ಪೊಲೀಸರಿಗೆ ಲಭ್ಯವಾಗಿದ್ದು, ತನ್ನ ಪತ್ನಿ ಸುನಿತಾಳ ಕೊಲೆ ಮಾಡುವ ಮುನ್ನ ವಿನಾಕಾರಣ ಹಲ್ಲೆ ಮಾಡಿ ಚಿತ್ರ ಹಿಂಸೆ ಕೊಟ್ಟು ಕೊಂದಿರುವ ವಿಚಾರ ಹೊರ ಬಂದಿದೆ. ಅಂದು ಹೊರಗೆ ಹೋಗಿದ್ದ ಪತ್ನಿ ಸುನಿತಾ ಮನೆಗೆ ಬರುತ್ತಿದ್ದಂತೆ ರೂಮ್‌ನಲ್ಲಿ ಕೂಡಿಹಾಕಿ ಆರೋಪಿ ಇಂದುಶೇಖರ ಹಲ್ಲೆ ಮಾಡಿದಾಗ ನನಗೆ ಯಾಕೆ ಹೊಡೀತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಆಗ ಸಿಟ್ಟಿಗೆದ್ದು ನಿನ್ನಿಂದ ನನ್ನ ನೆಮದಿ, ಜೀವನ ಹಾಳಾಯ್ತು ಎಂದು ಹೇಳಿ ರುಬ್ಬುಕಲ್ಲಿನಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿ ಬಳಿಕ ಬಾತ್‌ರೂಮ್‌ಗೆ ಎಳೆದೊಯ್ದು ರಕ್ತ ಸೋರಿದ ನಂತರ ಶವವನ್ನು ಕಾರಿನಲ್ಲಿ ಸಾಗಿಸಿ ಸೇಲಂನ ದಟ್ಟ ಅರಣ್ಯಪ್ರದೇಶದಲ್ಲಿ ಬಿಸಾಡಿ ಬಂದಿದ್ದ ಈ ನರಹಂತಕ.

RELATED ARTICLES

Latest News