ಬೆಂಗಳೂರು,ನ.19-ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿ ಸದಸ್ಯೆ ಬಿ.ವಿ.ಗೀತಾ ಅವರ ನಿವಾಸದ ಮೇಲೆ ವಿಶೇಷ ತನಿಖಾ ದಳ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಗೀತಾ ಅವರ ಬಂಧನದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ನಗರದಲ್ಲಿರುವ ಅವರ ನಿವಾಸದ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಭ್ಯರ್ಥಿ ನಂದೀಶ್ ಅವರಿಂದ 20 ಲಕ್ಷ ರೂ. ಪಡೆದ ಆರೋಪ ಗೀತಾ ಅವರ ಮೇಲಿದ್ದು, ರಾಜಮಹಲ್ ವಿಲಾಸ್ ಕ್ಲಬ್ ಬಳಿ ತಮ ಕಾರಿನಲ್ಲಿ ತೆರಳಿ ಅವರು ಹಣ ಪಡೆದಿದ್ದಾರೆಂಬ ಆರೋಪ ಕೇಳಿಬಂದಿದೆ.
ಈ ಹಿಂದೆ ಬಂಧಿತರಾಗಿ ಜಾಮೀನು ಪಡೆದು ಹೊರಬಂದಿದ್ದ ಗೀತಾ ಅವರನ್ನು ಎಸ್ಐಟಿ ಮತ್ತೆ ಬಂಧಿಸಿತ್ತು. ಮತ್ತೊಂದೆಡೆ ಗೀತಾ ಅವರು ಅಧಿಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಇವರ ಮೇಲಿದೆ.ಕೆಪಿಎಸ್ಸಿ ಹಗರಣದಲ್ಲಿ ಗೀತಾ ಅವರ ಪಾತ್ರದ ಕುರಿತು ಈಗಾಗಲೇ ಜಾರಿ ನಿರ್ದೇಶನಾಲಯ (ಇಡಿ)ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿದೆ.
