Homeರಾಜ್ಯಮೈಸೂರು ದಸರಾ : ಇಂದಿನಿಂದ ಗೋಲ್ಡ್ ಕಾರ್ಡ್‌ ಬುಕ್ಕಿಂಗ್‌ ಆರಂಭ

ಮೈಸೂರು ದಸರಾ : ಇಂದಿನಿಂದ ಗೋಲ್ಡ್ ಕಾರ್ಡ್‌ ಬುಕ್ಕಿಂಗ್‌ ಆರಂಭ

ಮೈಸೂರು,ಸೆ.21- ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೀಯವಾದ ಜಂಬೂ ಸವಾರಿ ಪಂಜಿನ ಕವಾಯತು ಮತ್ತು ಡ್ರೋನ್‌ ವೀಕ್ಷಣೆಗೆ ಟಿಕೆಟ್‌ ಹಾಗೂ ಗೋಲ್ಡ್ ಕಾರ್ಡ್‌ ಬುಕ್ಕಿಂಗ್‌ ಇಂದಿನಿಂದ ಪ್ರಾರಂಭವಾಗಿದೆ. ಈ ಕುರಿತು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ಹೊರಡಿಸಿದೆ.

ಅ.21 ರಂದು ನಡೆಯಲಿರುವ ಜಂಬೂಸವಾರಿ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಿಗೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಆನ್ಲೈನ್‌ ಬುಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತರು ಮೈಸೂರು ದಸರಾ ಅಧಿಕೃತ ವೆಬ್ಸೈಟ್‌ www.mysoredasara.gov.in ನಲ್ಲಿ ಇಂದು ಬೆಳಿಗ್ಗೆ 11.30 ರಿಂದ ಟಿಕೆಟ್‌ ಕಾಯ್ದಿರಿಸಬಹುದು.

ದರಗಳು ಕಳೆದ ವರ್ಷದಂತೆಯೇ ಇರಲಿದ್ದು, ಗೋಲ್ಡ್ ಕಾರ್ಡ್‌ನಲ್ಲಿ ಜಂಬೂಸವಾರಿ, ಪಂಜಿನ ಕವಾಯತು, ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಮತ್ತು ಒಂದು ದಿನದ ಡ್ರೋನ್‌ ಶೋ ವೀಕ್ಷಣೆಗೆ ಅವಕಾಶವಿದೆ. ಒಂದು ಟಿಕೆಟ್‌/ ಗೋಲ್ಡ್ ಕಾಡ್‌ರ್ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು, ಸಾರ್ವಜನಿಕರು ಮುಂಚಿತವಾಗಿ ಬುಕ್‌ ಮಾಡಿಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

RELATED ARTICLES
spot_img

Latest News