ನಿತ್ಯ ನೀತಿ : ಕನಸು ಕಂಡ ಕೂಡಲೇ ನನಸಾಗದು. ಕಠಿಣ ಪರಿಶ್ರಮ ಮತ್ತು ಮಹಾ ಸಂಕಲ್ಪವಿದ್ದಾಗ ಮಾತ್ರ ಕನಸುಗಳು ನಿಜವಾಗುತ್ತವೆ. – ಕಾಲಿನ್ ಪೊವೆಲ್ (ಅಮೆರಿಕ ರಾಜನೀತಿಜ್ಞ)
ಪಂಚಾಂಗ : ಮಂಗಳವಾರ, 07-04-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಕೃಷ್ಣ / ತಿಥಿ: ಪಂಚಮಿ / ನಕ್ಷತ್ರ: ಜ್ಯೇಷ್ಠಾ / ಯೋಗ: ವೃತೀಪಾತ / ಕರಣ: ಗರಜ
ಸೂರ್ಯೋದಯ – 06.13
ಸೂರ್ಯಾಸ್ತ – 6.32
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30
ರಾಶಿಭವಿಷ್ಯ :
ಮೇಷ: ಕುಟುಂಬದಲ್ಲಿ ತೊಂದರೆಗಳು ಎದುರಾಗ ಬಹುದು. ನಿಮ್ಮ ಹಾಗೂ ಸಂಗಾತಿ ಮಧ್ಯೆ ಗೊಂದಲಗಳು ಕಾಣಿಸಿಕೊಳ್ಳಬಹುದು.
ವೃಷಭ: ಕಠಿಣ ಪರಿಶ್ರಮ ಮತ್ತು ಪ್ರಯತ್ನದ ನಂತರ ವಿದ್ಯಾರ್ಥಿಗಳು ಯಶಸ್ಸು ಸಾ ಸುವರು.
ಮಿಥುನ: ನೀವು ಮಾಡುವ ಕೆಲಸಗಳಿಗೆ ಹಿರಿಯ ಅ ಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ.
ಕಟಕ: ಪಾರ್ಟ್‌ನರ್‌ಷಿಪ್ ವ್ಯವಹಾರ ಮಾಡುವವರು ನಂಬಿಕೆ ಎಂಬ ಸಂಗತಿ ಬಂದಾಗ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.
ಸಿಂಹ: ಬಹಳ ದಿನಗಳ ನಂತರ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲು ನಿಮಗೆ ಸಮಯ ಸಿಗಲಿದೆ.
ಕನ್ಯಾ: ಮನೆಯಲ್ಲಿ ಮಂಗಳಕರ ಕಾರ್ಯಗಳನ್ನು ಮಾಡುವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ದೂರ ಪ್ರಯಾಣ ಮಾಡದಿರಿ.
ತುಲಾ: ಮೇಲ ಕಾರಿಯೊಂದಿಗೆ ಅನಗತ್ಯ ಚರ್ಚೆಗಳು ನಡೆದು ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.
ವೃಶ್ಚಿಕ: ಪೋಷಕರಿಗೆ ಆರೋಗ್ಯ ಸಂಬಂ ಸಮಸ್ಯೆಗಳು ಎದುರಾಗಲಿದ್ದು, ಅವರ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಗಬಹುದು.
ಧನುಸ್ಸು: ಸಮಯ ವ್ಯರ್ಥ ಮಾಡಿಕೊಳ್ಳದಿರಿ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು.
ಮಕರ: ಉದ್ಯೋಗ ಬದಲಾವಣೆಗೆ ಅವಕಾಶಗಳಿವೆ. ನಿಮ್ಮದಲ್ಲದ ವಿಷಯ ಗಳಿಗೆ ತಲೆ ಹಾಕದಿರಿ.
ಕುಂಭ: ಬಡ್ತಿ ದೊರೆಯುವ ಯೋಗವಿದೆ. ಅದ ರೊಂದಿಗೆ ಸಮಸ್ಯೆಗಳೂ ಬರಲಿವೆ. ಎಚ್ಚರದಿಂದಿರಿ.
ಮೀನ: ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹಲವಾರು ರೀತಿಯ ಚಿಂತೆ ಕಾಡಲಿವೆ.
