Saturday, April 18, 2026
Homeರಾಜ್ಯಪ್ಯಾರಾಚೂಟ್‌ ತರಬೇತಿ ವೇಳೆ 50 ಅಡಿ ಎತ್ತರದಿಂದ ಬಿದ್ದ ಯೋಧ

ಪ್ಯಾರಾಚೂಟ್‌ ತರಬೇತಿ ವೇಳೆ 50 ಅಡಿ ಎತ್ತರದಿಂದ ಬಿದ್ದ ಯೋಧ

Soldier falls from 50 feet during parachute training

ಬೆಂಗಳೂರು,ಏ.18- ತರಬೇತಿ ವೇಳೆ ಪ್ಯಾರಾಚೂಟ್‌ನಿಂದ ಇಳಿಯುತ್ತಿದ್ದ ಸೈನಿಕರೊಬ್ಬರು 50 ಅಡಿ ಎತ್ತರದಿಂದ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಈರಾಪುರ ಬಳಿ ನಡೆದಿದೆ.

ಈ ಸ್ಥಳದಲ್ಲಿ ಹಲವಾರು ಸೈನಿಕರಿಗೆ ಪ್ಯಾರಾಚೂಚ್‌ ತರಬೇತಿಗಾಗಿ ಕರೆದುಕೊಂಡು ಬರಲಾಗಿತ್ತು.ಏರ್‌ಫೋರ್ಸ್‌ ಹೆಲಿಕಾಫ್ಟರ್‌ನಿಂದ ಪ್ಯಾರಾಚೂಟ್‌ ಅಳವಡಿಸಿಕೊಂಡು ಕೆಳಗೆ ಜಿಗಿಯುವ ತರಬೇತಿ ನಡೆಯುತ್ತಿತ್ತು.

ಆ ಸಂದರ್ಭದಲ್ಲಿ ಸೈನಿಕರೊಬ್ಬರು ಪ್ಯಾರಾಚೂಟ್‌ನಿಂದ ಜಿಗಿಯುವ ವೇಳೆ ಅವಘಡ ಉಂಟಾಗಿ 50 ಅಡಿ ಎತ್ತರದಿಂದ ಏಕಾಏಕಿ ನೆಲಕ್ಕೆ ಅಪ್ಪಳಿಸಿದ್ದರಿಂದ ಕಾಲಿನ ಮೂಳೆ ಮುರಿದಿದೆ.

ತಕ್ಷಣ ಸೇನೆಯವರೇ ಅವರನ್ನು ಬಳ್ಳಾರಿಯಿಂದ ಏರ್‌ಲಿಫ್‌್ಟ ಮೂಲಕ ನಗರದ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

RELATED ARTICLES

Latest News