Homeಬೆಂಗಳೂರುಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಗರ್ಭಿಣಿಯ ವಿಡಿಯೋ ಮಾಡಿದ ಆರೋಪ

ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಗರ್ಭಿಣಿಯ ವಿಡಿಯೋ ಮಾಡಿದ ಆರೋಪ

Allegation of filming a pregnant woman in a private hospital in Bengaluru

ಬೆಂಗಳೂರು,ಮೇ 25- ಖಾಸಗಿ ಆಸ್ಪತ್ರೆಯೊಂದರ ಶೌಚಾಲಯದಲ್ಲಿ ಗರ್ಭಿಣಿಯೊಬ್ಬರ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಲಾಗಿದೆ ಎಂಬ ಆರೋಪದ ಮೇರೆಗೆ ವರ್ತೂರು ಠಾಣೆ ಪೊಲೀಸರು ಹೌಸ್‌‍ಕೀಪಿಂಗ್‌ನ ಮೊಬೈಲ್‌ನ್ನು ವಶಕ್ಕೆ ಪಡೆದು ನೋಟೀಸ್‌‍ ಕಳುಹಿಸಿದ್ದಾರೆ.

ವಶಕ್ಕೆ ಪಡೆದಿರುವ ಮೊಬೈಲ್‌ನ್ನು ಎಫ್‌ಎಸ್‌‍ಎಲ್‌ಗೆ ಕಳುಹಿಸಲಾಗಿದ್ದು, ಅದರ ವರದಿ ಬಂದ ನಂತರವಷ್ಟೇ ಆತ ಚಿತ್ರೀಕರಣ ಮಾಡಿದ್ದಾನೆಯೇ ಅಥವಾ ಇಲ್ಲವೇ ಎಂಬುವುದು ಗೊತ್ತಾಗಲಿದೆ.
ಚಿಕ್ಕಬೆಳ್ಳಂದೂರು ನಿವಾಸಿಯಾಗಿ ರುವ 36 ವರ್ಷದ ಈ ಮಹಿಳೆ ಮೇ 21 ರಂದು ಮಧ್ಯಾಹ್ನ ಸರ್ಜಾಪುರ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳಿದ್ದು, 3ನೇ ಮಹಡಿಯಲ್ಲಿರುವ ಶೌಚಾಲಯ ಬಳಸಲು ಹೋಗಿದ್ದಾಗ ಅಲ್ಲೇ ಸುಳಿದಾಡುತ್ತಿದ್ದ ಹೌಸ್‌‍ಕೀಪರ್‌ ಮೊಬೈಲ್‌ ಮೂಲಕ ಫೋಟೋ, ವಿಡಿಯೋ ತೆಗೆದುಕೊಂಡಿದ್ದಾನೆಂಬ ಅನುಮಾನ ಬಂದಿದೆ.

ತಕ್ಷಣ ಆತನನ್ನು ವಿಚಾರಿಸುತ್ತಿದ್ದಂತೆ ಸ್ಥಳದಿಂದ ಓಡಿಹೋಗಿದ್ದಾನೆ. ಇದರಿಂದ ಗಾಬರಿಯಾದ ಮಹಿಳೆ ಆಸ್ಪತ್ರೆಯ ಆಡಳಿತ ಮಂಡಳಿಗೆ ತಿಳಿಸಿದ್ದಾರೆ.ನಂತರ ಹೌಸ್‌‍ಕೀಪರ್‌ ಕೃಷ್ಣರಾಮ್‌ ಪಂಗಿಂಗ್‌ ವರ್ತನೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಇದೀಗ ವರ್ತೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಆತನ ಮೊಬೈಲ್‌ನ್ನು ವಶಕ್ಕೆ ಪಡೆದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌‍ ನೀಡಿದ್ದಾರೆ.

RELATED ARTICLES

Latest News