Homeರಾಷ್ಟ್ರೀಯಭಾರತದಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಕೆ ಹೆಚ್ಚಳ

ಭಾರತದಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಕೆ ಹೆಚ್ಚಳ

Online transactions drive surge in credit card spending

ಬೆಂಗಳೂರು,ಮೇ25- ಭಾರತದ ಬಳಕೆಯ ಸ್ವರೂಪವು ವೇಗವಾಗಿ ಬದಲಾಗುತ್ತಿದ್ದು, ಜೀವನಶೈಲಿ, ಡಿಜಿಟಲ್‌ ವಹಿವಾಟುಗಳು ಮತ್ತು ಅನುಕೂಲಕರ ಪಾವತಿ ಆಯ್ಕೆಗಳನ್ನು ಜನರು ಹೆಚ್ಚು ಹೆಚ್ಚು ಬಳಸುತ್ತಿದ್ದು, ಇದು ಜನರ ಖರ್ಚು ಮಾಡುವ ವಿಧಾನಗಳು ಪ್ರತಿಬಿಂಬಿಸುತ್ತಿವೆ.

ಕಳೆದ ದಶಕದಲ್ಲಿ ಹೆಚ್ಚುತ್ತಿರುವ ಆದಾಯ, ವಿಸ್ತರಿಸುತ್ತಿರುವ ನಗರೀಕರಣ ಮತ್ತು ಹೆಚ್ಚು ಮಹತ್ವಾಕಾಂಕ್ಷೆ ಹೊಂದಿರುವ ಮಧ್ಯಮ ವರ್ಗವು ಜನರ ಖರ್ಚಿನ ರೀತಿಯನ್ನು ಬದಲಿಸಿದೆ. ಸದ್ಯ ಸುಮಾರು 11.86 ಕೋಟಿ (118.6 ಮಿಲಿಯನ್‌) ಕ್ರೆಡಿಟ್‌ ಕಾರ್ಡ್‌ಗಳು ಚಲಾವಣೆಯಲ್ಲಿದ್ದು, ಹಣಕಾಸು ವಷರ್ 2026ರಲ್ಲಿ 23.62 ಟ್ರಿಲಿಯನ್‌ಗಿಂತಲೂ ಹೆಚ್ಚು ಕ್ರೆಡಿಟ್‌ ಕಾರ್ಡ್‌ ವೆಚ್ಚವಾಗಿದೆ.

ಹೀಗಾಗಿ ಈ ವ್ಯವಸ್ಥೆಯು ಕೇವಲ ವಿಸ್ತರಣೆಯಾಗುತ್ತಿಲ್ಲ. ಬದಲಿಗೆ, ಬಳಕೆಯೂ ಹೆಚ್ಚುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಎಸ್‌‍ಬಿಐ ಕಾರ್ಡ್‌ನ ಎಂಡಿ ಮತ್ತು ಸಿಇಒ ಸಲಿಲಾ ಪಾಂಡೆ ಮಾತನಾಡಿ, ಎಸ್‌‍ಬಿಐ ಕಾರ್ಡ್‌ನಲ್ಲಿ ಭಾರತದ ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಕೊಡುಗೆ ನೀಡುವ ಜೊತೆಗೆ, ಗ್ರಾಹಕರ ವಿಕಸನಗೊಳ್ಳುತ್ತಿರುವ ಅಗತ್ಯತೆಗಳನ್ನು ಪೂರೈಸಲು ಅರ್ಥಪೂರ್ಣ ಪಾಲುದಾರಿಕೆಗಳು ಮತ್ತು ನಾವೀನ್ಯತೆಗಳ ಮೂಲಕ ನಮ ಉತ್ಪನ್ನಗಳ ಪೋರ್ಟ್‌ ಫೋಲಿಯೊವನ್ನು ಮತ್ತಷ್ಟ್ಟು ಬಲಪಡಿಸಲು ನಾವು ಗಮನ ಹರಿಸಿದ್ದೇವೆ ಎಂದು ಅವರು ಹೇಳಿದರು.

RELATED ARTICLES

Latest News