ನಿತ್ಯ ನೀತಿ : ಯಾರಿಗೂ ಭಯಪಡಬೇಡಿ, ತಡವಾದರೂ ಎಲ್ಲರನ್ನೂ ಪ್ರೀತಿಸಿ ಮತ್ತು ಗೌರವಿಸಿ…. ನೀವು ಯಾವುದನ್ನು ಆಯ್ಕೆ ಮಾಡಿಕೊಂಡರು ಕೊನೆಯಲ್ಲಿ ಒಳ್ಳೆಯದು ಮಾತ್ರ ಯಾವಾಗಲೂ ಗೆಲ್ಲುತ್ತದೆ, ಸತ್ಯ ಮಾತ್ರ ನಿಲ್ಲುತ್ತದೆ.
ಪಂಚಾಂಗ : ಸೋಮವಾರ, 02-03-2026
ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ / ಪಕ್ಷ: ಶುಕ್ಲ / ತಿಥಿ: ಹುಣ್ಣಿಮೆ / ನಕ್ಷತ್ರ: ಮಘಾ / ಯೋಗ: ಸುಕರ್ಮಾ / ಕರಣ: ಬಾಲವ
ಸೂರ್ಯೋದಯ – 06.36
ಸೂರ್ಯಾಸ್ತ – 6.29
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ಮಿತ್ರರಲ್ಲಿ ಕಂಡುಬರುವ ಭಿನ್ನಾಭಿಪ್ರಾಯ ಹೋಗಲಾಡಿಸಲು ಯತ್ನಿಸುವಿರಿ.
ವೃಷಭ: ಕೌಟುಂಬಿಕ ಕಲಹ ಬೀದಿಗೆ ಬರುವ ಸಾಧ್ಯತೆ ಇದೆ. ಅತ್ಯಂತ ಎಚ್ಚರಿಕೆ ವಹಿಸಿ.
ಮಿಥುನ: ವಾಹನ ಚಾಲಕರು ಅತ್ಯಂತ ಎಚ್ಚರಿಕೆ ಯಿಂದ ಇರಬೇಕಾದ ದಿನ.
ಕಟಕ: ಸಂತೋಷವನ್ನು ಇತರರೊಂದಿಗೆ ಹಂಚಿ ಕೊಳ್ಳಲು ಉತ್ತಮ ಅವಕಾಶಗಳು ಸಿಗುವುದಿಲ್ಲ.
ಸಿಂಹ: ನೀವು ಯೋಚಿಸಿ ದಂತೆಯೇ ಸನ್ನಿವೇಶಗಳು ಎದುರಾಗಿ ಅಚ್ಚರಿ ಮೂಡಿಸಲಿವೆ.
ಕನ್ಯಾ: ರಾಜಕೀಯ ಭವಿಷ್ಯದ ಬಗ್ಗೆ ಪ್ರಭಾವಿ ರಾಜಕಾರಣಿಯೊಂದಿಗೆ ಮಾತುಕತೆ ನಡೆಸುವಿರಿ.
ತುಲಾ: ಮಕ್ಕಳಿಗೆ ಹಿಂದೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ನೀವು ಶಕ್ತರಾಗಿರುವಿರಿ.
ವೃಶ್ಚಿಕ: ಹಲವು ದಿನಗಳಿಂದ ಬರಬೇಕಾಗಿರುವ ಹಣ ಸಂಜೆ ವೇಳೆಗೆ ಕೈ ಸೇರುವುದು.
ಧನುಸ್ಸು: ದೈನಂದಿನ ಚಟುವಟಿಕೆ ಹೊರತುಪಡಿಸಿ ವಿಭಿನ್ನ ಕಾರ್ಯಗಳಲ್ಲಿ ಆಸಕ್ತಿ ಹೊಂದುವಿರಿ.
ಮಕರ: ಮಗಳ ಮದುವೆಯ ಕಾರ್ಯಕಲಾಪಗಳು ಸುಗವಾಗಿ ಸಾಗುವುದರಿಂದ ನೆಮ್ಮದಿ ಇರಲಿದೆ.
ಕುಂಭ: ತುರ್ತು ವಿಷಯಗಳ ಬಗ್ಗೆ ಹೆಚ್ಚಾಗಿ ಗಮನ ಹರಿಸಿ. ಕೌಟುಂಬಿಕ ಸಂಬಂಧಗಳು ಗಟ್ಟಿಗೊಳ್ಳಲಿವೆ.
ಮೀನ: ಅತಿಯಾದ ಮಾತಿನಿಂದ ಉತ್ತಮ ಅವಕಾಶವನ್ನು ಕಳೆದುಕೊಳ್ಳಬೇಕಾದೀತು.
