Saturday, April 18, 2026
Homeಅಂತಾರಾಷ್ಟ್ರೀಯಅಮೆರಿಕದ A-10 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್ ಮಾಧ್ಯಮ ವರದಿ

ಅಮೆರಿಕದ A-10 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್ ಮಾಧ್ಯಮ ವರದಿ

Iran Says It Downed US A-10 Warthog Fighter Jet Near Strait Of Hormuz

ವಾಷಿಂಗ್ಟನ್‌,ಏ.4- ಇರಾನ್‌ ವಾಯು ರಕ್ಷಣಾ ಪಡೆಗಳು ಯುಎಸ್‌‍ ಎ-10 ವಿಮಾನವನ್ನು ಹೊಡೆದುರುಳಿಸಿವೆ ಎಂದು ಇರಾನ್‌ನ ಸೇನಾ ಸಾರ್ವಜನಿಕ ಸಂಪರ್ಕ ಕಚೇರಿಯನ್ನು ಉಲ್ಲೇಖಿಸಿ ಇರಾನ್‌ ರಾಜ್ಯ ಮಾಧ್ಯಮ ವರದಿ ಮಾಡಿದೆ.

ಅಸೋಸಿಯೇಟೆಡ್‌ ಪ್ರೆಸ್‌‍ ಈ ಹಿಂದೆ ಎರಡನೇ ಯುಎಸ್‌‍ ವಾಯುಪಡೆಯ ಯುದ್ಧ ವಿಮಾನವು ನಿನ್ನೆ ಮಧ್ಯಪ್ರಾಚ್ಯದಲ್ಲಿ ಪತನಗೊಂಡಿದೆ ಎಂದು ವರದಿ ಮಾಡಿತ್ತು. ಪೈಲಟ್‌ ಇರುವ ಸ್ಥಳ ಸೇರಿದಂತೆ ಬೇರೆ ಯಾವುದೇ ಮಾಹಿತಿ ತಕ್ಷಣಕ್ಕೆ ತಿಳಿದುಬಂದಿಲ್ಲ.

ಪೆಂಟಗನ್‌ ಮತ್ತು ಶ್ವೇತಭವನವು ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. ವಾರ್ಥಾಗ್‌ ಎಂಬ ಅಡ್ಡಹೆಸರಿನಿಂದಲೂ ಕರೆಯಲ್ಪಡುವ ಎ-10, ಏಕ-ಆಸನದ ವಿಮಾನವಾಗಿದೆ. ಮತ್ತೊಂದು ಘಟನೆಯಲ್ಲಿ ವಾಯುಪ್ರದೇಶದ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕಾ ಯುದ್ಧವಿಮಾನವನ್ನು ಇರಾನ್‌ ಪಡೆಗಳು ಹೊಡೆದುರುಳಿಸಿದ ಘಟನೆ ಜಾಗತಿಕ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಾಗಿ ಇರಾನ್‌ ಮಣ್ಣಿಗೆ ಉರುಳಿದ ಆ ವಿಮಾನ ಅಮೆರಿಕದ ಎಫ್‌-35 ಎಂಬ ಆಘಾತಕಾರಿ ಸುದ್ದಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಅಮೆರಿಕಾ ಯುದ್ಧವಿಮಾನವು ಮಹತ್ವದ ಮಿಷನ್‌‍ನಲ್ಲಿ ತೊಡಗಿಸಿಕೊಂಡಿದ್ದ ವೇಳೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಇರಾನ್‌ ಸರ್ಕಾರಿ ಮೂಲಗಳು ಸಹ ಪೈಲಟ್‌ ಅನ್ನು ಸೆರೆಹಿಡಿಯಲಾಗಿದೆ ಎಂದು ದೃಢಪಡಿಸಿವೆ.

ಇಸ್ಲಾಮಿಕ್‌ ಗಣರಾಜ್ಯದ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾಪ್‌್ರ್ಸನ ಆಧುನಿಕ ವಾಯು ರಕ್ಷಣಾ ವ್ಯವಸ್ಥೆಯಿಂದ ಮಧ್ಯ ಇರಾನ್‌ ಮೇಲೆ ಅಮೆರಿಕದ ಈ-35 ಫೈಟರ್‌ ಜೆಟ್‌ ಅನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್‌ ಆರೋಪಿಸಿದ ನಂತರ ಈ ಮಾಹಿತಿ ಹೊರ ಬಂದಿದೆ ಎನ್ನಲಾಗಿದೆ. ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಇದ್ದರು ಎನ್ನಲಾಗಿದ್ದು, ಈ ಪೈಕಿ ಒಬ್ಬ ಪೈಲಟ್‌‍ನ್ನು ಸುರಕ್ಷಣೆ ಮಾಡಲಾಗಿದ್ದು, ಮತ್ತೊಬ್ಬ ಸಿಬ್ಬಂದಿ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಇವರಿಗಾಗಿ ಅಮೆರಿಕಾ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಈ ರಕ್ಷಣಾ ಕಾರ್ಯಾಚರಣೆ ಕೂಡ ಸುಲಭವಾಗಿರಲಿಲ್ಲ. ಶೋಧ ಕಾರ್ಯಕ್ಕೆ ತೆರಳಿದ್ದ ಅಮೆರಿಕಾ ಹೆಲಿಕಾಪ್ಟರ್ಗಳ ಮೇಲೂ ಇರಾನ್‌ ಪಡೆಗಳು ದಾಳಿ ನಡೆಸಿದ ವರದಿಗಳು ಲಭ್ಯವಾಗಿವೆ. ಇದರಿಂದಾಗಿ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಿದೆ. ಯುದ್ಧದ ವಾತಾವರಣದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಅಮೆರಿಕಾಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ಘಟನೆಯ ನಂತರ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಇದು ಯುದ್ಧವೇ, ನಾವು ಯುದ್ಧದಲ್ಲಿದ್ದೇವೆ ಎಂದು ಹೇಳುವ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಒತ್ತಿ ಹೇಳಿದ್ದಾರೆ.

ಇರಾನ್‌ ಹೇಳುವುದೇನು? :
ಇರಾನ್‌ನ ಖತಮ್‌ ಅಲ್‌‍-ಅನ್ಬಿಯಾ ಪ್ರಧಾನ ಕಚೇರಿಯ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಇರಾನ್‌ನ ಕೆಲ ಪ್ರಕಾರ, ಜೆಟ್‌ ಅನ್ನು ಹೊಸ SEA ಏರೋಸ್ಪೇಸ್‌‍ ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದುರುಳಿಸಲಾಗಿದೆ ಎನ್ನಲಾಗಿದೆ.

ಬದುಕುಳಿದಿರುವುದೇ ಡೌಟ್‌‍ :
ಯುಎಸ್‌‍ನ ಐದನೇ ತಲೆಮಾರಿನ ಎಫ್‌-35 ವಿಮಾನವು ಇರಾನ್‌ನ ಮೇಲೆ ಹೊಸ ಐಆರ್ಜಿಸಿ ಏರೋಸ್ಪೇಸ್‌‍ ವಾಯು-ರಕ್ಷಣಾ ವ್ಯವಸ್ಥೆಗೆ ಡಿಕ್ಕಿ ಹೊಡೆದು ಉರುಳಿಸಲ್ಪಟ್ಟಿದೆ. ಡಿಕ್ಕಿಯ ಸಮಯದಲ್ಲಿ ಮತ್ತು ಅಪಘಾತದ ಸಮಯದಲ್ಲಿ ಸಂಭವಿಸಿದ ಬೃಹತ್‌ ಸ್ಫೋಟವನ್ನು ಗಮನಿಸಿದರೆ, ಪೈಲಟ್‌ ಹೊರಗೆ ಹಾರಿರುವ ಸಾಧ್ಯತೆ ಕಡಿಮೆ ಎಂದು ಖತಮ್‌ ಅಲ್‌‍-ಅನ್ಬಿಯಾ ಪ್ರಧಾನ ಕಚೇರಿಯ ವಕ್ತಾರರು ಪ್ರೆಸ್‌‍ ಟಿವಿ ಉಲ್ಲೇಖಿಸಿದ್ದಾರೆ.

ಆದಾಗ್ಯೂ, ಈ ಘಟನೆ ಇರಾನ್‌ ಜೊತೆ ನಡೆಯುತ್ತಿರುವ ಮಾತುಕತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಈ ಬೆಳವಣಿಗೆ ಅಮೆರಿಕಾ-ಇರಾನ್‌ ಸಂಬಂಧಗಳನ್ನು ಮತ್ತಷ್ಟು ಹದಗೆಡಿಸಿದೆ. ಇತ್ತೀಚಿನ ಘಟನೆಗಳು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಈ ನಡುವೆ ಅಮೆರಿಕಾ ತನ್ನ ಸೈನಿಕ ಶಕ್ತಿಯನ್ನು ಪ್ರದರ್ಶಿಸುತ್ತಿರುವಾಗ, ಇರಾನ್‌ ತನ್ನ ವಾಯು ರಕ್ಷಣಾ ಸಾಮಥ್ರ್ಯವನ್ನು ತೋರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಾರ್ಮುಜ್‌ ಜಲಸಂಧಿ ಜಾಗತಿಕ ತೈಲ ಸರಬರಾಜಿನ ಪ್ರಮುಖ ಕೇಂದ್ರವಾಗಿರುವುದರಿಂದ, ಯಾವುದೇ ಯುದ್ಧದ ಪರಿಣಾಮಗಳು ಜಾಗತಿಕ ಆರ್ಥಿಕತೆಯ ಮೇಲೂ ಬೀರುವ ಸಾಧ್ಯತೆ ಇದೆ. ತೈಲ ಬೆಲೆ ಏರಿಕೆ, ಸಾಗಣೆ ಸಮಸ್ಯೆಗಳು, ಮತ್ತು ವ್ಯಾಪಾರ ವ್ಯತ್ಯಯಗಳು ಎದುರಾಗುವ ಭೀತಿ ಹೆಚ್ಚಾಗಿದೆ.

ಈಗಾಗಲೇ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಆತಂಕ ವ್ಯಕ್ತಪಡಿಸಿದ್ದು, ಕೆಲ ರಾಷ್ಟ್ರಗಳು ಶಾಂತಿ ಮಾತುಕತೆಗಳ ಮೂಲಕ ಸಮಸ್ಯೆಯನ್ನು ಪರಿಹರಿಸಲು ಕರೆ ನೀಡಿದ್ದರೆ, ಇನ್ನು ಕೆಲವು ರಾಷ್ಟ್ರಗಳು ತಮ ನಾಗರಿಕರ ಸುರಕ್ಷತೆಗಾಗಿ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ.
ಒಟ್ಟಿನಲ್ಲಿ, ಪ್ರಸ್ತುತ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಮತ್ತಷ್ಟು ಗಂಭೀರಗೊಳಿಸಿದ್ದು, ಮುಂದಿನ ದಿನಗಳಲ್ಲಿ ಯುದ್ಧ ವಿಸ್ತಾರವಾಗುವ ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲ.

RELATED ARTICLES

Latest News