Homeರಾಜ್ಯಇಸ್ರೋ ಐಸೈಟ್‌ ಕ್ಯಾಂಪಸ್‌‍ ಮೇಲೆ ಡ್ರೋನ್‌ ಹಾರಾಟ : ತನಿಖೆ ಚುರುಕು

ಇಸ್ರೋ ಐಸೈಟ್‌ ಕ್ಯಾಂಪಸ್‌‍ ಮೇಲೆ ಡ್ರೋನ್‌ ಹಾರಾಟ : ತನಿಖೆ ಚುರುಕು

Unauthorized Drone Intrusion Raises Alarm at ISRO Campus

ಬೆಂಗಳೂರು,ಮೇ 6- ನಗರದಲ್ಲಿರುವ ಇಸ್ರೋ ಐಸೈಟ್‌ ಕ್ಯಾಂಪಸ್‌‍ ಮೇಲೆ ಡ್ರೋನ್‌ ಹಾರಾಟ ನಡೆಸಿದವರ ಪತ್ತೆಗಾಗಿ ಹೆಚ್‌ಎಎಲ್‌ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ವ್ಯಾಪಕ ತನಿಖೆ ಕೈಗೊಂಡಿದ್ದಾರೆ.

ಮೇ 2 ರಂದು ಬೆಳಗ್ಗೆ 8.15 ರ ಸುಮಾರಿನಲ್ಲಿ ನಿಷೇಧಿತ ನೋ ಡ್ರೋನ್‌ ಝೋನ್‌ ಪ್ರದೇಶದಲ್ಲಿ 12 ಸೆಂಕೆಂಡ್‌ಗಳ ಕಾಲ ಕಾರ್ತಿಕ್‌ ನಗರದಲ್ಲಿರುವ ಇಸ್ರೋ ಐಸೈಟ್‌ ಕ್ಯಾಂಪಸ್‌‍ ಮೇಲೆ ಅನುಮತಿ ಇಲ್ಲದೇ 80 ರಿಂದ 100 ಅಡಿ ಎತ್ತರದಲ್ಲಿ ಹಾರಾಟ ನಡೆಸಿರುವುದು ಕಂಡು ಬಂದಿದೆ.ದೇಶದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಇಸ್ರೋ ಐಸೈಟ್‌ ಕ್ಯಾಂಪಸ್‌‍ ಬಳಿ ಡ್ರೋನ್‌ ಹಾರಾಟ ನಡೆಸಿರುವುದು ಭದ್ರತಾ ವಲಯದಲ್ಲಿ ಆತಂಕ ಉಂಟಾಗಿದೆ.

ಈ ಪ್ರದೇಶದಲ್ಲಿ ಯಾವುದೇ ಅನುಮತಿ ಇಲ್ಲದೇ ವೈಮಾನಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಇಂತಹ ಪ್ರದೇಶದಲ್ಲಿ ಡ್ರೋನ್‌ ಹಾರಾಟ ನಡೆಸಿರುವುದು ಭದ್ರತೆ ಮತ್ತು ಸುರಕ್ಷತೆಗೆ ಗಂಭೀರ ಅಪಾಯವನ್ನು ಉಂಟು ಮಾಡುತ್ತದೆ.

ನಿಷೇಧಿತ ಪ್ರದೇಶವೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ಅಥವಾ ಕಾನೂನು ಉಲ್ಲಂಘಿಸಿ ಡ್ರೋನ್‌ ಹಾರಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಸ್ರೋದ ಸಿಐಎಸ್‌‍ಎಫ್‌ ಘಟಕದ ಸಬ್‌ಇನ್‌ಸ್ಪೆಕ್ಟರ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೆಚ್‌ಎಎಲ್‌ ಠಾಣೆ ಪೊಲೀಸರು ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಡ್ರೋನ್‌ ಹಾರಿಸಿದವರ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Latest News