Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-08-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-08-2026)

Today's Horoscope

ನಿತ್ಯ ನೀತಿ : ಹತ್ತಿಯಂತಿರಬೇಡ… ಹೊಸೆದು ಬಿಡುತ್ತಾರೆ. ಮುಳ್ಳಿನಂತಿರು… ತುಳಿಯುವುದಿರಲಿ, ಮುಟ್ಟುವುದಕ್ಕೂ ಹಿಂಜರಿಯುತ್ತಾರೆ.

ಪಂಚಾಂಗ : ಶನಿವಾರ, 01-08-2026
ಪರಾಭವ ನಾಮ ಸಂವತ್ಸರ /ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ / ಪಕ್ಷ: ಕೃಷ್ಣ / ತಿಥಿ: ತೃತೀಯಾ / ನಕ್ಷತ್ರ: ಶತಭಿಷಾ / ಯೋಗ: ಶೋಭನ / ಕರಣ: ವಣಿಜ
ಸೂರ್ಯೋದಯ – ಬೆ.6.06
ಸೂರ್ಯಾಸ್ತ – 06.48
ರಾಹುಕಾಲ – 9.00-10.30
ಯಮಗಂಡ ಕಾಲ – 1.00- 3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ: ಮನೆಯಲ್ಲಿ ಜಗಳಗಳು ಉಂಟಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರಾಗಲಿದೆ.
ವೃಷಭ: ಮಕ್ಕಳು ಶಿಕ್ಷಣ ಹಾಗೂ ಸೃಜನಶೀಲ ಕ್ಷೇತ್ರ ಗಳಲ್ಲಿ ಆಸಕ್ತಿ ವಹಿಸುವರು.
ಮಿಥುನ: ಶಕ್ತಿ ಮತ್ತು ಉತ್ಸಾಹ ತರುವ ಆನಂದಮಯ ಪ್ರವಾಸಕ್ಕೆ ಹೋಗುವಿರಿ.

ಕಟಕ: ಉದ್ಯೋಗದಲ್ಲಿ ಬಡ್ತಿ ಹಾಗೂ ನೀವು ಕೇಳಿದ ಸ್ಥಳಕ್ಕೆ ವರ್ಗಾವಣೆ ಪಡೆಯಲು ಅವಕಾಶವಿದೆ.
ಸಿಂಹ: ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಆಲೋಚನೆ ಮಾಡದಿರಿ.
ಕನ್ಯಾ: ಸಂಗಾತಿಯ ಬೇಡಿಕೆಗಳು ನಿಮಗೆ ಸ್ವಲ್ಪ ಒತ್ತಡ ಉಂಟುಮಾಡಬಹುದು.

ತುಲಾ: ನಿಮ್ಮ ಅಹಂಕಾರದ ಕಾರಣಕ್ಕೆ ಹಣಕಾಸು ನಷ್ಟ ಅನುಭವಿಸಲಿದ್ದೀರಿ.
ವೃಶ್ಚಿಕ: ಯಾವುದೇ ಕಾರಣಕ್ಕೂ ಕೆಲಸ ಬಿಡುವಂಥ ನಿರ್ಧಾರ ಮಾಡಬೇಡಿ
ಧನುಸ್ಸು: ಯಾವುದೇ ಅಪಾಯಕಾರಿ ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.

ಮಕರ: ಸ್ವಲ್ಪ ಹಣ ಬರುವುದು. ಆದರೂ ಅದು ಕೈಯಲ್ಲಿ ನಿಲ್ಲುವುದಿಲ್ಲ. ಮಿತವಾಗಿ ಬಳಸಿ.
ಕುಂಭ: ಮಧುಮೇಹ, ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳಬಹುದು ಅಥವಾ ಉಲ್ಬಣಿಸಬಹುದು.
ಮೀನ: ಕಾನೂನು ತೊಡಕು ಎದುರಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿನ್ನಡೆಯಾಗಲಿದೆ.

RELATED ARTICLES

Latest News