Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-08-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-08-2026)

Today's Horoscope

ನಿತ್ಯ ನೀತಿ : ಹಣದ ಬಲದಿಂದ ಮೇಲಕ್ಕೆ ಬಂದವನು ಹಣ ಇರುವ ಮನುಷ್ಯರಿಗೆ ಗೌರವ ಕೊಡುತ್ತಾನೆ, ಕಷ್ಟಪಟ್ಟು ಮೇಲಕ್ಕೆ ಬಂದವನು ಕಷ್ಟಪಡುವ ಪ್ರತಿ ಮನುಷ್ಯನಿಗೂ ಗೌರವ ಕೊಡುತ್ತಾನೆ.

ಪಂಚಾಂಗ : ಬುಧವಾರ, 19-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಶ್ರಾವಣ /ಪಕ್ಷ: ಶುಕ್ಲ / ತಿಥಿ: ಸಪ್ತಮಿ / ನಕ್ಷತ್ರ: ಸ್ವಾತಿ / ಯೋಗ: ಬ್ರಹಾ / ಕರಣ: ಗರಜ

ಸೂರ್ಯೋದಯ – ಬೆ.6.09
ಸೂರ್ಯಾಸ್ತ – 06.40
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ದೂರ ಪ್ರಯಾಣ ಬೇಡ.
ವೃಷಭ: ಮಗನ ಆರೋಗ್ಯದಲ್ಲಿ ಉಂಟಾಗುವ ವ್ಯತ್ಯಾಸದಿಂದಾಗಿ ಜವಾಬ್ದಾರಿ ಹೆಚ್ಚಾಗಲಿದೆ.
ಮಿಥುನ: ಹೊಸ ಜನರನ್ನು ಭೇಟಿ ಸಂಭವ.

ಕಟಕ: ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ ಮಾಡುವಿರಿ.
ಸಿಂಹ: ಅತಿಯಾದ ಒಳ್ಳೆಯತನದಿಂದ ಸಂಕಷ್ಟಕ್ಕೆ ಸಿಲುಕುವಿರಿ.
ಕನ್ಯಾ: ನಿಗದಿತ ಅವ ಯಲ್ಲಿ ಕೆಲಸ ಮುಗಿಸುವ ಪ್ರಯತ್ನ ದಲ್ಲಿ ಆತುರಾತುರವಾಗಿ ನಿರ್ಧಾರ ಕೈಗೊಳ್ಳದಿರಿ.

ತುಲಾ: ಸಾಲಗಾರರ ಕಿರಿಕಿರಿ ತಪ್ಪಲಿದೆ.ಎಲ್ಲ ಹೊಸ ಯೋಜನೆ ಗಳನ್ನೂ ನಿಮ್ಮ ನೆರೆಹೊರೆ ಯವರು ಇಷ್ಟ ಪಡುವರು.
ವೃಶ್ಚಿಕ: ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಒಳಿತು.
ಧನುಸ್ಸು: ಆರೋಗ್ಯದ ಕಡೆ ಗಮನ ಹರಿಸಿ.

ಮಕರ: ಒಂದು ವಿಚಾರದ ಬಗ್ಗೆ ತಿಳಿದುಕೊಳ್ಳದೆ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳದಿರಿ.
ಕುಂಭ: ಸರ್ಕಾರಿ ನೌಕರರಿಗೆ ಉನ್ನತ ಸ್ಥಾನಮಾನ ಸಿಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮೀನ: ರಾಜಕೀಯ ವ್ಯಕ್ತಿಗಳು ವಿವಾದಾತ್ಮಕ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಬಹುದು.

RELATED ARTICLES
spot_img

Latest News