ನಿತ್ಯ ನೀತಿ : ಕನಸುಗಳನ್ನು ಸಾಕಾರಗೊಳಿಸಲು ಮಾರ್ಗ ಬದಲಿಸಬೇಕು, ತತ್ವಗಳನ್ನಲ್ಲ. ಗಿಡಗಳು ಚಿಗುರು ಪಡೆಯಲು ಎಲೆಗಳನ್ನು ಉದುರಿಸುತ್ತವೆ, ಬೇರುಗಳನ್ನಲ್ಲ..!
ಪಂಚಾಂಗ : ಬುಧವಾರ, 26-05-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ್ಮ / ಮಾಸ: ಅಧಿಕ / ಪಕ್ಷ: ಶುಕ್ಲ / ತಿಥಿ: ಏಕಾದಶಿ / ನಕ್ಷತ್ರ: ಹಸ್ತ / ಯೋಗ: ವ್ಯತೀಪಾತ / ಕರಣ: ಭವ ಸೂರ್ಯೋದಯ – ಬೆ.05.54
ಸೂರ್ಯಾಸ್ತ – ಸಾ.06.42
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ವೃಷಭ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಓದಿನ ಬಗ್ಗೆ ಕಾಳಜಿ ಇರಲಿ.
ಮಿಥುನ: ಹಣದ ವಿಷಯದಲ್ಲಿ ದೊಡ್ಡ ಸಮಸ್ಯೆ ಇರುವುದಿಲ್ಲ. ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕಟಕ: ಯಂತ್ರೋಪಕಣ ದುರಸ್ತಿ ಮಾಡುವವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಸಿಗಲಿದೆ.
ಸಿಂಹ: ಉನ್ನತ ಅಧಿಕಾರಿಗಳು ನಿಮ ಮೇಲೆ ಕೋಪಗೊಳ್ಳು ವರು. ಎಚ್ಚರಿಕೆಯಿಂದಿರಿ.
ಕನ್ಯಾ: ಅನ್ಯರ ಮಾತಿಗೆ ಕಿವಿಗೊಡಬೇಡಿ.
ತುಲಾ: ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುವವರಿಗೆ ಜನಸಾಮಾನ್ಯರಿಂದ ಉತ್ತಮ ಪ್ರೋತ್ಸಾಹ ದೊರೆಯಲಿದೆ.
ವೃಶ್ಚಿಕ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದೂರ ಪ್ರಯಾಣ ಮಾಡದಿರಿ.
ಧನುಸ್ಸು: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಮಕರ: ಸರಿಯಾದ ಗುರಿ ಮುಟ್ಟಲು ನಿಮಗೆ ಗುರುಗಳ ಮಾರ್ಗದರ್ಶನ ಅತ್ಯವಶ್ಯಕ.
ಕುಂಭ: ಉದ್ಯೋಗ ಬದಲಾವಣೆಗೆ ಉತ್ತಮ ಸಮಯ ಮತ್ತು ಹೊಸ ಅವಕಾಶಗಳು ಸಿಗಲಿವೆ.
ಮೀನ: ಸಾಲಗಾರರ ಕಿರಿಕಿರಿ ಉಂಟಾಗಲಿದೆ. ಮಕ್ಕಳ ವಿಷಯದಲ್ಲಿ ಚಿಂತೆ ಕಾಡಲಿದೆ.
