ಹಾಸನ, ಜು.19-ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಧರ್ಮಪತ್ನಿ ಚನ್ನಮ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿರುವ ಹಿನ್ನೆಲೆಯಲ್ಲಿ ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ಮಾವಿನಕೆರೆ (ಕ್ಯಾತನಹಳ್ಳಿ) ಗ್ರಾಮದಲ್ಲಿ ಸಿದ್ಧತೆಗಳು ನಡೆಯುತ್ತಿವೆ.ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ತಪ್ಪಲಿನಲ್ಲಿರುವ ಸ್ಥಳದಲ್ಲಿ ಚನ್ನಮ ಅವರ ಅಂತ್ಯಸಂಸ್ಕಾರ ನೆರವೇರಲಿದ್ದು, ಸಂಬಂಧಿಕರು ಹಾಗೂ ಸ್ಥಳೀಯರು ಸ್ಥಳವನ್ನು ಸ್ವಚ್ಛಗೊಳಿಸಿ ಅಂತಿಮ ವಿಧಿವಿಧಾನಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಅಂತ್ಯಕ್ರಿಯೆಗೆ ಆಗಮಿಸುವ ಗಣ್ಯರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಆಸನ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಚನ್ನಮ ಅವರಿಗೆ ಅಂತಿಮ ನಮನ ಸಲ್ಲಿಸಲು ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ವಿಶೇಷ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ವಾಹನಗಳ ಸುಗಮ ಸಂಚಾರ ಹಾಗೂ ಜನಸಂದಣಿ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಭದ್ರತೆಯನ್ನೂ ಬಿಗಿಗೊಳಿಸಲಾಗಿದೆ.
ರಾಜಕೀಯ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇರುವುದರಿಂದ ಹರದನಹಳ್ಳಿ, ಮಾವಿನಕೆರೆ, ಕ್ಯಾತನಹಳ್ಳಿ ಗ್ರಾಮಗಳಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಅಂತಿಮ ವಿಧಿವಿಧಾನಗಳು ಗೌರವಯುತವಾಗಿ ಹಾಗೂ ಶಾಂತಿಯುತವಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಕುಟುಂಬದವರು, ಗ್ರಾಮಸ್ಥರು, ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ.
ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಿಂದ ಹರದನಹಳ್ಳಿಗೆ ಚನ್ನಮ ಅವರ ಅಂತಿಮ ದರ್ಶನ ಪಡೆಯಲು ಹೋಗುವವರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.















ಹರದನಹಳ್ಳಿಯಲ್ಲಿ ಮಡುಗಟ್ಟಿದ ಶೋಕ
ಬೆಂಗಳೂರು, ಜು.19-ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ ಅವರ ನಿಧನಕ್ಕೆ ಶೋಕ ಸಾಗರ ಮಡುಗಟ್ಟಿದೆ. ಬೆಂಗಳೂರು ಮಾತ್ರವಲ್ಲದೆ, ರಾಜ್ಯಾದ್ಯಂತ ಚನ್ನಮ ಅವರ ನಿಧನಕ್ಕೆ ಅತೀವ ಕಂಬನಿ ಮಿಡಿಯಲಾಗಿದೆ. ಅಂತಿಮ ದರ್ಶನಕ್ಕೆ ಹರದನಹಳ್ಳಿಗೆ ಜನಸಾಗರವೇ ಹರಿದು ಬಂದಿತ್ತು.
ಪಕ್ಷಾತೀತವಾಗಿ ರಾಜಕೀಯ ನಾಯಕರು, ಮುಖಂಡರು, ಕಾರ್ಯಕರ್ತರು, ಉದ್ಯಮಿಗಳು, ಅಧಿಕಾರಿಗಳು, ರೈತಮುಖಂಡರು, ರೈತರು, ವಿವಿಧ ಸಂಘಟನೆಗಳ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿ ಚನ್ನಮ ಅವರ ಅಂತಿಮ ದರ್ಶನ ಪಡೆದು ಶೋಕ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಚನ್ನಮ ಅವರು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮಕ್ಕೆ ಗ್ರಾಮವೇ ಶೋಕ ಸಾಗರ ಮಡುಗಟ್ಟಿದೆ. ಇಂದು ಸಂಜೆ ವೇಳೆಗೆ ಪಾರ್ಥಿವ ಶರೀರ ಹರದನಹಳ್ಳಿ ತಲುಪುವ ಹಿನ್ನೆಲೆಯಲ್ಲಿ ವಿವಿಧ ತಾಲ್ಲೂಕು, ಗ್ರಾಮಗಳಿಂದ ಜನರು ಆಗಮಿಸಿ ಅಂತಿಮ ದರ್ಶನ ಪಡೆಯಲು ದುಃಖ ತಪ್ತರಾಗಿ ಕಾಯುತ್ತಿದ್ದರು.
ದೇವೇಗೌಡರ ಹುಟ್ಟೂರಾದ ಹರದನಹಳ್ಳಿಯು ಚನ್ನಮ ಅವರಿಗೆ ತಾಯಿಯ ತವರೂರು ಹಾಗೂ ಪತಿಯ ಊರು ಕೂಡ ಒಂದೇ ಆಗಿತ್ತು. ಹೀಗಾಗಿ ದಂಪತಿಗಳಿಬ್ಬರಿಗೂ ಹರದನಹಳ್ಳಿ ಅಚ್ಚುಮೆಚ್ಚಾಗಿತ್ತು. ಸಮಸ್ತ ಗ್ರಾವಸ್ಥರೊಂದಿಗಿನ ಒಡನಾಟವು ಭಾವನಾತಕತೆಯಿಂದ ಕೂಡಿತ್ತು.
ಹೀಗಾಗಿ ಇಡೀ ಗ್ರಾಮವೇ ಚನ್ನಮ ಅವರ ಸರಣೆ ಮಾಡುತ್ತಾ, ಅವರ ಸತ್ಕಾರ-ಆತಿಥ್ಯವನ್ನು ಸರಿಸುತ್ತಾ ಕಣ್ಣೀರು ಸುರಿಸುತ್ತಿತ್ತು. ಮನೆಗೆ ಯಾರೇ ಬರಲಿ ಅವರನ್ನು ಅತ್ಯಂತ ಪ್ರೀತಿ, ವಿಶ್ವಾಸದಿಂದ ಮಾತನಾಡಿಸಿ ಆತಿಥ್ಯ ನೀಡುತ್ತಿದ್ದರು. ಆತಿಥ್ಯ ಪಡೆದ ಹಲವರು ಅವರ ಗುಣಗಾನ ಮಾಡುತ್ತಾ ಅಪರೂಪದ ಮಾತೆ ಎಂದು ಸರಿಸಿ ದುಃಖ ವ್ಯಕ್ತಪಡಿಸುತ್ತಿದ್ದು ಸಾಮಾನ್ಯವಾಗಿತ್ತು.
ದೇವೇಗೌಡರು ಪ್ರಧಾನಿಯಾದಾಗಲೂ ಅವರು ತಮ ಸರಳ, ಸಜ್ಜನಿಕೆಯಿಂದ ನಡೆದುಕೊಂಡಿದ್ದರು. ಯಾವತ್ತೂ ಕೂಡ ಅವರು ಅಹಂ ತೋರಿಸಿರಲಿಲ್ಲ. ಸಾಮಾನ್ಯರಂತೆಯೇ ಜೀವನ ನಡೆಸಿದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು. ಹಾಗಾಗಿಯೇ ಚನ್ನಮ ಅವರು ಎಲ್ಲರ ಪ್ರೀತಿ-ಗೌರವಕ್ಕೆ ಭಾಜನರಾಗಿದ್ದರು. ಚನ್ನಮ ಅವರ ಅಗಲಿಕೆಯನ್ನು ಅರಗಿಸಿಕೊಳ್ಳುವುದು ಅವರ ಕುಟುಂಬಕ್ಕೆ ಮಾತ್ರವಲ್ಲ, ರಾಜಕೀಯ ನಾಯಕರು, ಸಿನಿಮಾ ಕಲಾವಿದರು, ರೈತರು, ಬಂಧುಗಳು, ಅಭಿಮಾನಿಗಳಿಗೆ ದುಃಖ ತಡೆಯಲಾಗದೇ ಕಣ್ಣೀರು ಸುರಿಸುತ್ತಿದ್ದರು.
ಗಣ್ಯಾತಿಗಣ್ಯರ ಸಂತಾಪ
ಬೆಂಗಳೂರು, ಜು.19-ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯಾತಿಗಣ್ಯರು ಪಡೆದು ಅತೀವ ಸಂತಾಪ ವ್ಯಕ್ತಪಡಿಸಿದರು. ನಿನ್ನೆ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಚನ್ನಮ ಅವರು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
ಪದನಾಭನಗರದ ನಿವಾಸದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ವಿ.ಸದಾನಂದಗೌಡ, ವೀರಪ್ಪಮೊಯ್ಲಿ, ಬಸವರಾಜ ಬೊಮಾಯಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್, ಯು.ಟಿ.ಖಾದರ್, ಪ್ರಿಯಾಂಕ ಖರ್ಗೆ ಅವರು ಚನ್ನಮ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಬಿ.ಶ್ರೀರಾಮುಲು. ಜನಾರ್ದನರೆಡ್ಡಿ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಸ್.ಸುರೇಶ್‌ಕುಮಾರ್, ಹೆಚ್.ಕೆ.ಕುಮಾರಸ್ವಾಮಿ, ಎನ್.ಚಲುವರಾಯಸ್ವಾಮಿ, ಎಚ್.ವಿಶ್ವನಾಥ್, ಜಮೀರ್ ಅಹದ್ ಖಾನ್, ಡಾ.ಹೆಚ್.ಸಿ. ಮಹದೇವಪ್ಪ , ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಟಿ.ಎನ್.ಜವರಾಯಿಗೌಡ, ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಹೆಚ್.ಎಂ.ರಮೇಶ್‌ಗೌಡ, ಕೆ.ಎ.ತಿಪ್ಪೇಸ್ವಾಮಿ ಸೇರಿದಂತೆ ಪಕ್ಷಾತೀತವಾಗಿ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ವಿವಿಧ ಕ್ಷೇತ್ರಗಳ ಗಣ್ಯರು, ಮುಖಂಡರು ಚನ್ನಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ದೇವೇಗೌಡರು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ
ಬೆಂಗಳೂರು,ಜು.19- ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ ಅವರು ಭೌತಿಕವಾಗಿ ಇನ್ನಿಲ್ಲವಾದುದು ಅತ್ಯಂತ ದುಃಖದ ವಿಷಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀ ದೇವೇಗೌಡರೊಂದಿಗಿನ ಸುದೀರ್ಘ ದಾಂಪತ್ಯ ಜೀವನ ಮತ್ತು ಅವರ ಸಾರ್ವಜನಿಕ ಬದುಕಿನಲ್ಲಿ ಅವರಿಗೆ ನೆರಳಾಗಿದ್ದುಕೊಂಡು ಇಡೀ ಕುಟುಂಬವನ್ನು ಮುನ್ನಡೆಸಿದ ಶಕ್ತಿಯಾಗಿದ್ದರು. ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯ ಪತ್ನಿಯಾಗಿದ್ದರೂ ಸರಳತೆಯ ಸಾಕಾರ ಮೂರ್ತಿಯಂತಿದ್ದ ಅವರು ದೇವೇಗೌಡರಂತೆಯೇ ದೈವಭಕ್ತರಾಗಿದ್ದರು. ತಮ ಪತಿಯ ಪ್ರತಿಕ್ಷಣದ ಆಗುಹೋಗು, ಒಳಿತು ಕೆಡಕು ಎಲ್ಲವೂ ಭಗವಂತನ ಇಚ್ಛೆ ಎಂದು ನಂಬಿದ್ದರು.
ಭಗವಂತನು ಚನ್ನಮನವರ ಅಗಲಿಕೆಯಿಂದ ದುಃಖತಪ್ತರಾಗಿರುವ ದೇವೇಗೌಡರು ಮತ್ತು ಅವರ ಇಡೀ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು, ಇಳೆಯ ಮೇಲಿನ ತಮ ಬದುಕನ್ನು ಸಾರ್ಥಕ ಪಡಿಸಿಕೊಂಡಿರುವ ಚನ್ನಮನವರ ಆತಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಆಶಿಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಬನಿ ಮಿಡಿತ ಚಿತ್ರರಂಗ
ಬೆಂಗಳೂರು, ಜು.19- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ ಅವರ ನಿಧನಕ್ಕೆ ರಾಜಕೀಯ ವಲಯವಷ್ಟೇ ಅಲ್ಲದೆ, ಕನ್ನಡ ಚಿತ್ರರಂಗವೂ ಕೂಡ ಕಂಬನಿ ಮಿಡಿದಿದೆ.ನಿಧನ ಸುದ್ದಿ ತಿಳಿಯುತ್ತಿದ್ದಂತೆ ನಿರ್ಮಾಪಕರಾದ ಚಿನ್ನೇಗೌಡರು, ಸಾ.ರಾ.ಗೋವಿಂದು, ಎಸ್.ನಾರಾಯಣ್, ಹಿರಿಯ ನಟರಾದ ದೊಡ್ಡಣ್ಣ, ಸುಂದರಾಜ್, ನಟರಾದ ಡಾಲಿ ಧನಂಜಯ್, ದುನಿಯಾ ವಿಜಯ್, ನಟಿ ಪೂಜಾಗಾಂಧಿ ಸೇರಿದಂತೆ ಸಿನಿಮಾ ಕ್ಷೇತ್ರದ ಹಲವು ಕಲಾವಿದರು ಚನ್ನಮ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ನಿರ್ಮಾಪಕರು, ನಿರ್ದೇಶಕರು, ಸಾಹಿತಿಗಳು, ಹಿರಿಯ ಕಲಾವಿದರು, ನಟ-ನಟಿಯರು, ರಂಗ ಕಲಾವಿದರು ಸೇರಿದಂತೆ ಹಲವು ಗಣ್ಯರು ಚನ್ನಮ ಅವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.
ನಾಯ್ಡು ಕಂಬನಿ :
ಅಮರಾವತಿ, ಜು. 19 – ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ ಅವರ ನಿಧನಕ್ಕೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ದುಃಖದ ಸಂದರ್ಭದಲ್ಲಿ ದೇವೇಗೌಡರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಮತ್ತು ಧೈರ್ಯ ದೊರೆಯಲಿ ಎಂದು ಚಂದ್ರಬಾಬು ನಾಯ್ಡು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ನವದೆಹಲಿ,ಜು.19- ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರಿಗೆ ಫೋನ್ ಕರೆ ಮಾಡಿ ಅವರ ಪತ್ನಿ ಚೆನ್ನಮರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.ನಂತರ ಎಕ್‌್ಸಪೋಸ್ಟ್‌ನಲ್ಲಿ ಮೋದಿ ಅವರು ಸಂತಾಪದ ವ್ಯಕ್ತಪಡಿಸಿ ಚೆನ್ನಮನವರ ನಿಧನದಿಂದ ತೀವ್ರ ದುಃಖ ವಾಗಿದೆ. ಅವರು ತಮ ವಿನಯ ಮತ್ತು ಸಮಾಜ ಸೇವೆಯ ಮೇಲಿನ ಬದ್ಧತೆ ಗಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಈ ದುಃಖದ ಸಮಯದಲ್ಲಿ, ಶ್ರೀ ದೇವೇಗೌಡರು ಮತ್ತು ಅವರ ಇಡೀ ಕುಟುಂಬದೊಂದಿಗೆ ನಾನು ದುಃಖಿತನಾಗಿದ್ದೇನೆ, ಓಂ ಶಾಂತಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಅಭಿಮಾನಿ ಸಂಸ್ಥೆಯಿಂದ ಸದ್ಗೃಹಿಣಿ ನೆನಪು

ಬೆಂಗಳೂರು, ಜು.19- ಭಾರತೀಯ ಮಹಿಳೆಯರ ಆದರ್ಶವಿರುವುದು ಸತಿತ್ವದಲ್ಲಿ ಮತ್ತು ತಾಯ್ತನದಲ್ಲಿ. ಈ ದೇಶದ ಸಂಸ್ಕೃತಿಯ ಹಿರಿಮೆ ಜಗತ್ತಿಗೆ ಆದರ್ಶಪ್ರಾಯವಾಗಿ ಮಾನ್ಯತೆ ಪಡೆಯಲು ಭಾರತೀಯ ಮಹಿಳೆಯರ ಜೀವನ ಶೈಲಿಯೇ ಕಾರಣ. ಇದಕ್ಕೆ ಸಾಕಾರಮೂರ್ತಿಯಂತಿದ್ದ ಚೆನ್ನಮ ದೇವೇಗೌಡರು ಇಡೀ ಕುಟುಂಬವನ್ನು ಸಲಹಿದ ಸದ್ಗಹಿಣಿ.
ಎರಡು ದಶಕಗಳ ಹಿಂದೆ ಅಭಿಮಾನಿ ಸಮೂಹ ಈ ಮಹಾತಾಯಿಗೆ ಅಭಿಮಾನ ಪೂರ್ವಕವಾಗಿ ಅಭಿಮಾನಿ ಸಂಭ್ರಮ ಏರ್ಪಡಿಸಿದ್ದು ಎಂದಿಗೂ ಮರೆಯಲು ಅಸಾಧ್ಯ. ಪ್ರತಿಯೊಬ್ಬ ಪತಿಯ ಸಾಧನೆಯ ಹಿಂದೆ ಪತ್ನಿ ಇರುತ್ತಾಳೆ ಎಂಬುದಕ್ಕೆ ಸಾಕ್ಷಿ ಎಂಬಂತೆ, 2005ರಲ್ಲಿ ನಡೆದ ಅಭಿಮಾನಿ ಸಂಸ್ಥೆಯ 20ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಅಭಿಮಾನಿ ಸಂಭ್ರಮ -20 ಸಮಾರಂಭದಲ್ಲಿ ದೇವೇಗೌಡರೇ ತಮ ಪತ್ನಿಗೆ ಫಲಪುಷ್ಪ ತಾಂಬೂಲ ನೀಡಿ ಗೌರವಿಸಿದ್ದು ಅಪೂರ್ವ ಗಳಿಗೆಯೇ ಸರಿ.
ಸಾಧಕರಿಂದ ತಮ ಧರ್ಮಪತ್ನಿಗೆ ಸಾರ್ಥಕತೆಯ ಅಭಿನಂದನೆಗಳನ್ನು ಸಲ್ಲಿಸುವ ಆ ಅಪೂರ್ವ ಸಮಾರಂಭವನ್ನು ಅಭಿಮಾನಿ ಸಮೂಹ ಏರ್ಪಡಿಸಿದ್ದು ಅದು ಸಾರ್ಥಕವಾಯಿತು.
ಈ ಸವಿನೆನಪಿಗಾಗಿ ಅಭಿಮಾನಿ ಪ್ರಕಾಶನದ ವತಿಯಿಂದ ಸದ್ಗಹಿಣಿ ಎಂಬ ಪುಸ್ತಕವನ್ನು ಕೂಡ ಪ್ರಕಟಿಸಿತ್ತು. ಅನೇಕ ಮಹನಿಯರು ದಂಪತಿಗಳನ್ನು ಹರಸಿ ಶುಭಹಾರೈಸಿದ್ದರು. ಚನ್ನಮ ಅವರ ಸೌಮ್ಯ ಹಾಗೂ ಸರಳ ನಡೆನುಡಿಯನ್ನು ಕಂಡು ಅಚ್ಚರಿಗೊಂಡಿದ್ದರು.
ಚನ್ನಮ್ಮರಿಗೆ ಅಂತಿಮ ಪೂಜೆ
ಬೆಂಗಳೂರು, ಜು.19- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ಸಂಪ್ರದಾಯದಂತೆ ಅಂತಿಮ ಪೂಜೆ ಸಲ್ಲಿಸಲಾಯಿತು. ಪಾರ್ಥಿವ ಶರೀರವನ್ನು ಹಾಸನಕ್ಕೆ ವಾಹನದಲ್ಲಿ ಕೊಂಡೊಯ್ಯುವ ಮುನ್ನ ಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳಂತೆ ಪೂಜೆ ನೆರವೇರಿಸಲಾಯಿತು.
ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಮಕ್ಕಳು, ಮೊಮಕ್ಕಳು, ಅಳಿಯಂದಿರು ಪೂಜೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ದೇವೇಗೌಡರು ತಮ ಪತ್ನಿಯನ್ನು ನೆನೆದು ದುಃಖ ತಡೆಯಲಾಗದೆ ಕಣ್ಣೀರಿಟ್ಟು ನಮಿಸುತ್ತಿದ್ದ ದೃಶ್ಯ ಎಂಥವರಿಗೂ ಕರಳು ಹಿಂಡುವಂತಿತ್ತು. ಅದೇ ರೀತಿ ಮಕ್ಕಳು, ಮೊಮಕ್ಕಳು ಕೂಡ ಕಂಬನಿ ಮಿಡಿದರು.
ವಿಶೇಷವಾಗಿ ಅಲಂಕರಿಸಿದ್ದ ವಾಹನದಲ್ಲಿ ಪೂರ್ವ ನಿಗದಿತ ಮಾರ್ಗದಲ್ಲಿ ಹಾಸನಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ತಮ ತಾಯಿಯ ಅಗಲಿಕೆಯ ದುಃಖ ಸಹಿಸಲಾಗದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅಷ್ಟೇ ಅಲ್ಲದೆ ಬಂಧುಬಾಂಧವರು ಕೂಡ ಶೋಕ ವ್ಯಕ್ತಪಡಿಸಿದರು.
ಕಂಬನಿ ಮಿಡಿದ ಚಿತ್ರರಂಗ
ಬೆಂಗಳೂರು, ಜು.19- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚನ್ನಮ ಅವರ ನಿಧನಕ್ಕೆ ರಾಜಕೀಯ ವಲಯವಷ್ಟೇ ಅಲ್ಲದೆ, ಕನ್ನಡ ಚಿತ್ರರಂಗವೂ ಕೂಡ ಕಂಬನಿ ಮಿಡಿದಿದೆ. ನಿಧನ ಸುದ್ದಿ ತಿಳಿಯುತ್ತಿದ್ದಂತೆ ನಿರ್ಮಾಪಕ ರಾದ ಚಿನ್ನೇಗೌಡರು, ಸಾ.ರಾ.ಗೋವಿಂದು, ಎಸ್.ನಾರಾಯಣ್, ಹಿರಿಯ ನಟರಾದ ದೊಡ್ಡಣ್ಣ, ಸುಂದರಾಜ್, ನಟರಾದ ಡಾಲಿ ಧನಂಜಯ್, ದುನಿಯಾ ವಿಜಯ್, ನಟಿ ಪೂಜಾಗಾಂಧಿ ಸೇರಿದಂತೆ ಸಿನಿಮಾ ಕ್ಷೇತ್ರದ ಹಲವು ಕಲಾವಿದರು ಚನ್ನಮ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.ನಿರ್ಮಾಪಕರು, ನಿರ್ದೇಶಕರು, ಸಾಹಿತಿಗಳು, ಹಿರಿಯ ಕಲಾವಿದರು, ನಟ-ನಟಿಯರು, ರಂಗ ಕಲಾವಿದರು ಸೇರಿದಂತೆ ಹಲವು ಗಣ್ಯರು ಚನ್ನಮ ಅವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.
