ನಿತ್ಯ ನೀತಿ : ಅತಿಯಾದ ನಿರೀಕ್ಷೆಗಳಿಂದ, ಅನಗತ್ಯ ವಾದಗಳಿಂದ, ಸುಳ್ಳು ಸಂಬಂಧಗಳಿಂದ ದೂರವಿದ್ದರೆ…. ಬದುಕು ನಿಜವಾಗಿಯೂ ಸುಂದರವಾಗುತ್ತದೆ.
ಪಂಚಾಂಗ : ಮಂಗಳವಾರ, 11-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ / ಪಕ್ಷ: ಕೃಷ್ಣ / ತಿಥಿ: ಚತುರ್ದಶಿ / ನಕ್ಷತ್ರ: ಪುನರ್ವಸು / ಯೋಗ: ಸಿದ್ಧಿ / ಕರಣ: ವಿಷ್ಟಿ
ಸೂರ್ಯೋದಯ – ಬೆ.6.08
ಸೂರ್ಯಾಸ್ತ- 06.44
ರಾಹುಕಾಲ – 3.00-4.30
ಯಮಗಂಡ ಕಾಲ – 9.00- 10.30
ಗುಳಿಕ ಕಾಲ – 12.00- 1.30
ರಾಶಿಭವಿಷ್ಯ :
ಮೇಷ: ಕೆಲಸದಲ್ಲಿ ಯಶಸ್ಸು ಸಾ ಸಲು ನಿಮಗೆ ಸಹಾಯ ಮತ್ತು ಮಾರ್ಗದರ್ಶನ ಸಿಗಲಿದೆ.
ವೃಷಭ: ಮಹತ್ತರ ಕೆಲಸ ಸಾ ಸುವಲ್ಲಿ ಸಫಲರಾಗು ವಿರಿ. ಕುಟುಂಬದ ಸುಖ ಸಂತೋಷ ಸಿಗಲಿದೆ.
ಮಿಥುನ: ಪ್ರೇಮ ಸಂಬಂಧಗಳಲ್ಲಿ ಯಶಸ್ಸು ಸಿಗಲಿದೆ. ಇಂದು ಶುಭ ದಿನವಾಗಲಿದೆ.
ಕಟಕ: ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ದೂರ ಪ್ರಯಾಣ ಮಾಡುವಿರಿ.
ಸಿಂಹ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸಿನೊಂದಿಗೆ ಲಾಭ ಸಿಗಲಿದೆ ಹಾಗೂ ಪ್ರಶಂಸೆಗೆ ಅರ್ಹರಾಗುತ್ತೀರಿ.
ಕನ್ಯಾ: ಸ್ನೇಹಿತರು ಅಥವಾ ಕುಟುಂಬದೊಂದಿಗೆ ಉತ್ತಮ ಪ್ರವಾಸ ಕೈಗೊಂಡು ಪರಸ್ಪರ ಮಾತನಾಡಿಕೊಂಡು ಸಮಯ ಕಳೆಯುತ್ತೀರಿ.
ತುಲಾ: ನಿಮ್ಮ ಇಚ್ಛೆಯಂತೆ ಕೆಲವು ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಸಫಲರಾಗುವಿರಿ.
ವೃಶ್ಚಿಕ: ಕಠಿಣ ಪರಿಶ್ರಮಕ್ಕೆ ತಕ್ಕಂತೆ ಯಶಸ್ಸು ದೊರೆಯಲಿದೆ. ವಿದ್ಯಾಭ್ಯಾಸಕ್ಕೆ ಉತ್ತಮ ದಿನ.
ಧನುಸ್ಸು: ಸುತ್ತಾಡಲು ಹೊರಗೆ ಹೋಗುವುದರಿಂದ ಮನಸ್ಸಿಗೆ ಬಹಳಷ್ಟು ಮನರಂಜನೆ ಸಿಗಲಿದೆ.
ಮಕರ: ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕುಂಭ: ಸಂಗಾತಿಯೊಂದಿಗೆ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳುವುದು ಒಳಿತು.
ಮೀನ: ವೃತ್ತಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳಾ ಗಬಹುದು. ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ.
